ನಮ್ಮ ಬೆಂಗಳೂರು ಫೌಂಡೇಶನ್ ಒಂದು ಅಂತರ್ಗತ ಸಾಮಾಜಿಕ ಸಂಘಟನೆಯಾಗಿದ್ದು, ನಮ್ಮ ನಗರದ ಭವಿಷ್ಯಕ್ಕೆ ಮಾರ್ಗದರ್ಶನ ನೀಡುವ ಬದಲಾವಣೆಯ ಅಗತ್ಯತೆಗಾಗಿ ಸಾಮೂಹಿಕ ಸಾಮಾಜಿಕ ಪರಿಣಾಮವನ್ನು ತರಲು ವಕೀಲಿಕೆ, ಕ್ರಿಯಾಶೀಲತೆ ಮತ್ತು ಸಹಭಾಗಿತ್ವದ ಮೂಲಕ ಬೆಂಗಳೂರಿಗರಿಗೆ ಉತ್ತೇಜನ ನೀಡುತ್ತದೆ.
ಕೆರೆಗಳ ಪರಿಸರವನ್ನು ರಕ್ಷಿಸಲು ಮತ್ತು ಎಲ್ಲ ಅತಿಕ್ರಮಣಗಳನ್ನು ತೆಗೆದುಹಾಕಲು ಪಾರದರ್ಶಕ ಮತ್ತು ಜವಾಬ್ದಾರಿಯುತ ಪ್ರಕ್ರಿಯೆಯನ್ನು ರಚಿಸುವುದು ನಮ್ಮ ಬೆಂಗಳೂರು ಪ್ರತಿಷ್ಠಾನದ ಪ್ರಯತ್ನವಾಗಿದೆ. ಅನೇಕ ಎನ್‌ಜಿಒಗಳು ಎನ್‌ಬಿಎಫ್‌ನೊಂದಿಗೆ ಕಾನೂನು, ತಾಂತ್ರಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಚಾಲನೆಯಲ್ಲಿರುವ ಅಭಿಯಾನಗಳು ಬೆಂಗಳೂರಿನ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಜಾಗೃತಿಯನ್ನು ತರುತ್ತವೆ
ಉದ್ಯಾನನಗರಿ ಬೆಂಗಳೂರಿನ ಅತಿದೊಡ್ಡ ಕೆರೆ ಮತ್ತು ಅದರ ಜಲಾನಯನ ಪ್ರದೇಶ, ಬಫರ್ ವಲಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಐತಿಹಾಸಿಕ ತೀರ್ಪನ್ನು ರಕ್ಷಿಸುವ ಹೋರಾಟದಲ್ಲಿ ಎನ್‌ಬಿಎಫ್ ಮುಂಚೂಣಿಯಲ್ಲಿದೆ. ಬೆಂಗಳೂರಿನ ಅತಿದೊಡ್ಡ ಕೆರೆಯ ಮೂಲವನ್ನು ಉಳಿಸಲು ನಮ್ಮ ಬೆಂಗಳೂರು ಪ್ರತಿಷ್ಠಾನವು ಎನ್‌ಜಿಟಿಗೆ ಮನವಿ ಮಾಡಿತ್ತು. ಇದು ನಮ್ಮ ದೀರ್ಘ ಪ್ರಯಾಣದ ಯಶಸ್ಸಿನ ಕಥೆಗಳ ಪ್ರಾರಂಭವಾಗಿತ್ತು.
ನಾವು ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಕ್ರಿಯವಾಗಿರುವ ಗುಂಪುಗಳನ್ನು ಹೊಂದಿದ್ದೇವೆ ಎಂದು ಹೇಳಿದರೆ ಅದು ಖಂಡಿತಾ ಉತ್ಪ್ರೇಕ್ಷೆಯಲ್ಲ, ತಜ್ಞರು (ಕೆರೆಗಳು / ಕಾನೂನುತಿಳಿದವರು) ಕಾಲಕಾಲಕ್ಕೆ ವಿವಿಧ ಕೆರೆಗಳಲ್ಲಿ ಪಟ್ಟು ಬಿಡದೆ ಕೆಲಸ ಮಾಡುತ್ತಿದ್ದಾರೆ ಮತ್ತು ಕೆರೆಗಳ ಪುನರುಜ್ಜೀನ ಕುರಿತು ಕೆಲವು ಯಶಸ್ಸಿನ ಕಥೆಗಳನ್ನು ಹೊಂದಿದ್ದಾರೆ. ಅಗರ, ಬೆಳ್ಳಂದೂರು ಕೆರೆ ಮತ್ತು ಅದರ ಅದರ ಪ್ರದೇಶವನ್ನು ಉಳಿಸುವುದು ಸೇರಿದಂತೆ 23 ಕೆರೆಗಳ ಉಳಿವಿಗೆ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿರುವುದು ಇದರಲ್ಲಿ ಸೇರಿವೆ.
ಉನ್ನತ ವರ್ಗದ ಹೌಸಿಂಗ್ ಕಾಂಪ್ಲೆಕ್ಸ್ ಆಗುತ್ತಿದ್ದ ಮೇಸ್ತ್ರೀಪಾಳ್ಯ ಒತ್ತುವರಿಯನ್ನ ತೆರವು ಮಾಡಿಸಲಾಗಿದೆ.
ನಮ್ಮೆಲ್ಲ ಕೆರೆಗಳ ಉಳಿಸುವ ಕೆಲಸದಲ್ಲಿ ಸ್ಥಳೀಯ ಸಮುದಾಯದ ಪಾಲ್ಗೊಳ್ಳುವಿಕೆ ಇದೆ. ಇದಕ್ಕಾಗಿ ನ್ಯಾಯಾಲಯ ಮತ್ತು ಚಟುವಟಿಕೆಗಳಲ್ಲಿ ಅಪಾರ ಪ್ರಮಾಣದ ಹಣ ವ್ಯಯಿಸುವ ಜೊತೆಗೆ ಅಪಾರ ಪ್ರಮಾಣದ ಜನಬಲ(ಎನ್‌ಬಿಎಫ್ & ಕೆರೆ ಗುಂಪುಗಳು)ವನ್ನು ಬಳಸಲಾಗುತ್ತಿದೆ. ನಮ್ಮ ಬೆಂಗಳೂರು ಪ್ರತಿಷ್ಠಾನದ ಅಡಿಯಲ್ಲಿ ನಾಗರಿಕರು, ತಜ್ಞರು, ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಈ ತೀವ್ರ ಮತ್ತು ಶ್ರಮದಾಯಕ ಯುನೈಟೇಡ್ ಬೆಂಗಳೂರು ಕೆರೆ ಅಭಿಯಾನವು ಬೆಂಗಳೂರಿನಲ್ಲಿ ಇತಿಹಾಸದ ಕೆರೆಗಳ ವೈಭವವನ್ನು ಮರುಕಳಿಸುವಲ್ಲಿ ನೆರವಾಗಿದೆ.
ಯುನೈಟೆಡ್ ಬೆಂಗಳೂರು ಅಭಿಯಾನವನ್ನು ಸರಿ ಸುಮಾರು ಒಂದು ವರ್ಷದವರೆಗೆ ನಡೆಸಲಾಯಿತು ಮತ್ತು ಅದು ಈ ವಿಷಯಗಳ ಮೇಲೆ ಕೇಂದ್ರೀಕೃತವಾಗಿತ್ತು.
(ಎ) ಕೆರೆಗಳ ಬಗ್ಗೆ ಜಾಗೃತಿ ವೃದ್ಧಿಸಿ ಈ ಅರ್ಜಿಗೆ ಜನರ ಬೆಂಬಲವನ್ನು ಪಡೆಯುವುದು;
(ಬಿ) ಕೆರೆಗಳ ಅಕ್ರಮಗಳನ್ನು ಗುರುತಿಸಲು ಕೆರೆ ತಪಾಸಣೆಯನ್ನು ಆಯೋಜಿಸುವುದು ಮತ್ತು ತಜ್ಞರೊಂದಿಗೆ ಕೆರೆಗಳ ಪುನರುಜ್ಜೀವನಕ್ಕೆ ಅರ್ಜಿಗಳನ್ನು ಸಲ್ಲಿಸುವುದು;
(ಸಿ) ತಳಮಟ್ಟದಲ್ಲಿ ಬೆಂಬಲ ಪಡೆಯಲು ವಿವಿಧ ಕೆರೆಗಳ ಗುಂಪುಗಳು / ಸಂಘಗಳೊಂದಿಗೆ ಕೆಲಸ ಮಾಡುವುದು
ಮಟ್ಟದ ಡೇಟಾ.
ಬೆಂಗಳೂರು ನಗರದ ಪ್ರತಿಯೊಂದು ಕೆರೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗಿದೆ. ಪುನಃ ಪರಿಶೀಲಿಸಲಾಗಿದೆ, ಸಮಯೋಚಿತವಾಗಿ ಲೋಕಾಯುಕ್ತರಿಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಪ್ರಕರಣಗಳು ಮತ್ತು ಮೇಲ್ವಿಚಾರಣೆಯ ಬಗ್ಗೆ ನಮ್ಮ ಪಟ್ಟುಹಿಡಿದ ಅನುಸರಣೆಯಿಂದಾಗಿ, ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳ ಮೇಲೆ ನಿರಂತರ ಒತ್ತಡ ಹೇರಲಾಗಿದೆ (ಉದಾಹರಣೆಗಳು – ಹುಳಿಮಾವು ಕೆರೆ ಅತಿಕ್ರಮ ಪ್ರದೇಶಕ್ಕೆ ಲೋಕಾಯುಕ್ತರ ಭೇಟಿ, ವೃಷಭಾವತಿ ಕೆರೆ ಕಣಿವೆಗೆ ಭೇಟಿ ಇತ್ಯಾದಿ). ಇದು ಅಸಾಧ್ಯವಾದ ನಡೆಗಳಾಗಿರಬಹುದು ಆದರೆ ಯುನೈಟೆಡ್ ಬೆಂಗಳೂರಿನ ಜಾಗೃತ ನಾಗರಿಕ ಚಳವಳಿಗೆ ಅಕ್ಷರಶಃ ಲೋಕಾಯುಕ್ತವನ್ನು ಬೆಂಗಳೂರಿನಲ್ಲಿ ಕೆರೆಗಳನ್ನು ಉಳಿಸುವ ನಿರ್ಣಾಯಕತೆಯ ಬಗ್ಗೆ ಅರಿವು ಮೂಡಿಸಲು ಕರೆತಂದಿದೆ.
ಯುನೈಟೆಡ್ ಬೆಂಗಳೂರು ಅಭಿಯಾನವು ಈಗ ಬೆಂಗಳೂರಿನ ಅನೇಕ ಕೆರೆಗಳ ಸಮಸ್ಯೆಗಳ ಕೇಂದ್ರಬಿಂದುವಾಗಿದೆ. ಅದು ಎಷ್ಟರಮಟ್ಟಿಗೆ ಎಂದರೆ, ಹೈಕೋರ್ಟ್‌ಗಳು ಮತ್ತು ಎನ್‌ಜಿಟಿ ಅನೇಕ ಕೆರೆಗಳ ಅಕ್ರಮದ ಬಗ್ಗೆ(ಬೆಳ್ಳಂದೂರು ಸರೋವರ ಮತ್ತು ಕೈಕೊಂಡ್ರಲ್ಲಿ ಕೆರೆ) ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿವೆ.
Post a comment