nbf@namma-bengaluru.org
9591143888

ಅಭಿಯಾನಗಳು

ನಮ್ಮ ಹಕ್ಕು-ನಾಗರಿಕ ಹಕ್ಕುಗಳ ಸರಣಿ:

ನಮ್ಮ ಬೆಂಗಳೂರು ಪ್ರತಿಷ್ಠಾನವು ಸಂಸದ ಶ್ರೀ ರಾಜೀವ್ ಚಂದ್ರಶೇಖರ್ ಅವರ ಸಹಭಾಗಿತ್ವದಲ್ಲಿ ಜೂನ್ 16,2016ರಂದು ಇಂಥದ್ದೊಂದು ಮೊಟ್ಟ ಮೊದಲ ಉಪಕ್ರಮ ಎನ್ನಬಹುದಾದ ನಾಗರಿಕರ ಪರಸ್ಪರ ಸಂವಾದಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಇತ್ತೀಚೆಗೆ ಮಂಜೂರಾದ ರಿಯಲ್ ಎಸ್ಟೇಟ್ ರೆಗ್ಯುಲೇಷನ್ ಆಕ್ಟ್(ರೇರಾ) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸು ವುದು, ಮಾಹಿತಿ ನೀಡುವುದು ಹಾಗೂ ಶಿಕ್ಷಣ ನೀಡುವುದು ಕಾರ್ಯಾಗಾರದ ಉದ್ದೇಶ. ಕಾನೂನು ಉಲ್ಲಂಘಿಸುವ/ವಂಚಕ ಬಿಲ್ಡರ್‍ಗಳ ವಿರುದ್ಧ ಗ್ರಾಹಕರಿಗೆ ಇರುವ ಹಕ್ಕುಗಳನ್ನು ಅರ್ಥ ಮಾಡಿ ಕೊಳ್ಳಲು ನೆರವಾಗುವುದು ಕಾರ್ಯಾಗಾರದ ಗುರಿ. ಭಾರಿ ಪ್ರತಿರೋಧ, ಚರ್ಚೆ ಹಾಗೂ ಹಲವು ತಿದ್ದುಪಡಿಗಳ ಬಳಿಕ ರಿಯಲ್ ಎಸ್ಟೇಟ್(ನಿಯಂತ್ರಣ ಹಾಗೂ ಅಭಿವೃದ್ಧಿ) ಕಾಯಿದೆ, 2016 ರಾಜ್ಯಸಭೆಯಲ್ಲಿ ಮಾರ್ಚ್ 10,2016ರಲ್ಲಿ ಅಂಗೀಕಾರ ಪಡೆಯಿತು.

ಉಲ್ಲೇಖಿಸಿದ ಕಾರ್ಯಾಗಾರವು #ನಮ್ಮ ಹಕ್ಕು-ನಾಗರಿಕ ಹಕ್ಕುಗಳ ಸರಣಿಯ ಭಾಗವಾಗಿದ್ದು, ಬೆಂಗಳೂರಿಗರ ಹಕ್ಕುಗಳಿಗಾಗಿ ದೀರ್ಘ ಕಾಲದಿಂದ ಹೋರಾಡುತ್ತಿರುವ ಸಂಸದ ಶ್ರೀ ರಾಜೀವ್ ಚಂದ್ರಶೇಖರ್ ಅವರ ಚಿಂತನೆಯ ಫಲ.

ರಿಯಲ್ ಎಸ್ಟೇಟ್(ನಿಯಂತ್ರಣ ಮತ್ತು ಅಭಿವೃದ್ಧಿ)ಕಾಯಿದೆ,2016: ಮನೆಯನ್ನು ಕೊಳ್ಳುವವರ ಹಕ್ಕುಗಳೇನು? 

ರಿಯಲ್ ಎಸ್ಟೇಟ್ ಕ್ಷೇತ್ರವು ದೇಶದ ಆರ್ಥಿಕ ಚಲನೆಯಲ್ಲಿ ಪ್ರಮುಖ ಅಂಗವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಅಪಾರ ಬೆಳವಣಿಗೆ ಕಂಡಿದೆ. ಗೃಹ ಹಾಗೂ ವಾಣಿಜ್ಯ ಆಸ್ತಿಗಳಿಗೆ, ವಿಶೇಷವಾಗಿ, ಪ್ರಮುಖ ನಗರಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ರಿಯಲ್ ಎಸ್ಟೇಟ್ ವಹಿವಾಟು ಹಣಕಾಸು ನೆರವು, ಆಸ್ತಿ ಕಾನೂನುಗಳ ಅನ್ವಯಿಸುವಿಕೆ, ಮಾಲೀಕತ್ವದ ವರ್ಗಾವಣೆ ಇತ್ಯಾದಿ ಹಲವು ಕ್ಲಿಷ್ಟ ಮೂಲಾಂಶಗಳನ್ನು ಒಳಗೊಂಡಿದ್ದು, ಇದೆಲ್ಲ ಹೆಚ್ಚು ಮಂದಿಗೆ ಅರ್ಥವಾಗುವುದಿಲ್ಲ. ಜನಸಾಮಾನ್ಯನೊಬ್ಬನಿಗೆ ಆಸ್ತಿ ಖರೀದಿ ಎನ್ನುವುದು ಜೀವನದ ಅತ್ಯಂತ ಪ್ರಮುಖ ನಿರ್ಧಾರವಾಗಿದ್ದು, ಖರೀದಿಗೆ ಸಂಬಂಧಿಸಿದ ವಹಿವಾಟುಗಳು ಅನಿಯಂತ್ರಿತ ಹಾಗೂ ಅಸ್ತವ್ಯಸ್ತವಾಗಿರುವುದರಿಂದ ಹೆಚ್ಚಿನ ಖರೀದಿದಾರರು ಸುಸ್ತಾಗಿ ಬಿಡುತ್ತಾರೆ. ಮನೆ ಖರೀದಿಸುವವರು ಬಿಲ್ಡರ್‍ಗಳ ನಿಷ್ಕಾಳಜಿ ಪ್ರವೃತ್ತಿಯನ್ನು ಎದುರಿಸಬೇಕಿದ್ದು, ಖರೀದಿದಾರರಿಗೆ ನೆರವಾಗಲೆಂದು ಸರ್ಕಾರ ರಿಯಲ್ ಎಸ್ಟೇಟ್(ನಿಯಂತ್ರಣ ಮತ್ತು ಅಭಿವೃದ್ಧಿ)ಕಾಯಿದೆ,2016ನ್ನು ಅಂಗೀಕರಿಸಿದೆ.

ರೇರಾದಿಂದ ಏನು ಲಾಭ?

ಪ್ರಾಯಶಃ ಅತ್ಯಂತ ಗ್ರಾಹಕಪರ ಎನ್ನಬಹುದಾದ ಕಾಯಿದೆಯಾದ ರೇರಾ, ಮನೆ ಖರೀದಿಸುವವರ ಹಿತಾಸಕ್ತಿಯನ್ನು ಕಾಯುವ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಭ್ರಷ್ಟಾಚಾರ ಹಾಗೂ ಅದಕ್ಷತೆಯನ್ನು ನಿವಾರಿಸುವ ಭರವಸೆ ನೀಡುತ್ತದೆ. ಕಾಯಿದೆಯು ರಿಯಲ್ ಎಸ್ಟೇಟ್ ಯೋಜನೆಗಳ ನಿರ್ವಹಣೆ ಹಾಗೂ ನಿರ್ಮಾಣದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಉತ್ತೇಜಿಸುತ್ತದೆ. ಇದರಿಂದ ಗ್ರಾಹಕರಿಗೆ ಆಗಬಹುದಾದ ಪ್ರಯೋಜನಗಳೆಂದರೆ, ಮನೆ ಖರೀದಿಸುವವರ ಹಕ್ಕುಗಳ ರಕ್ಷಣೆ, ಬಿಲ್ಡರ್‍ಗಳ ಜವಾಬ್ದಾರಿ, ಉಲ್ಲಂಘನೆಗೆ ದಂಡ ಹಾಗೂ ವಿವಾದಗಳನ್ನು ಶೀಘ್ರವಾಗಿ ಬಗೆಹರಿಸಲು ಪ್ರತ್ಯೇಕ ಮೇಲ್ಮನವಿ ನ್ಯಾಯಾಧಿಕರಣ ಸ್ಥಾಪನೆ. ಪ್ರಾಯಶಃ ಅತ್ಯಂತ ಗ್ರಾಹಕಸ್ನೇಹಿ ಕಾಯಿದೆಯಾದ ರೇರಾ, ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಹಾಗೂ ಆಯ್ಕೆಯ ಫ್ಲ್ಯಾಟ್‍ನ ಲಭ್ಯತೆಯನ್ನು ಖಾತ್ರಿಗೊಳಿಸುತ್ತದೆ. ಬಿಲ್ಡರ್‍ಗಳು ತಪ್ಪು ಮಾಹಿತಿ ನೀಡದಂತೆ ನೋಡಿಕೊಳ್ಳಲು, ಕಾಯಿದೆಯನ್ವಯ ಯೋಜನೆಯ ಸಮಗ್ರ ಮಾಹಿತಿಯನ್ನು ಬಹಿರಂಗಪಡಿಸಬೇಕಾಗುತ್ತದೆ.

ಗುಣವೈಶಿಷ್ಟ್ಯಗಳು: ರೇರಾದ ಪ್ರಮುಖ ಗುಣಲಕ್ಷಣಗಳನ್ನು ಕೆಳಗೆ ಪಟ್ಟಿ ಮಾಡಿದ್ದು, ಇವು ಹೂಡಿಕೆದಾರರ ಆತ್ಮವಿಶ್ವಾಸವನ್ನು ಹೆಚ್ಚಿಸುವುದುಮಾತ್ರವಲ್ಲದೆ, ಆಸ್ತಿ ಮಾರುಕಟ್ಟೆಯಲ್ಲಿ  ಸಕಾರಾತ್ಮಕ ಬದಲಾವಣೆ ತರಲಿದೆ.

  • ರಿಯಲ್ ಎಸ್ಟೇಟ್ ವಹಿವಾಟನ್ನು ನಿಯಂತ್ರಿಸಲು ರಾಜ್ಯ(ಇಲ್ಲವೇ ಕೇಂದ್ರಾಡಳಿತ ಪ್ರದೇಶ)ದ ಮಟ್ಟದಲ್ಲಿ ನಿಯಂತ್ರಣ ಪ್ರಾಧಿಕಾರವೊಂದನ್ನು ರಚಿಸಬೇಕು
  • ಎಲ್ಲ ರಿಯಲ್ ಎಸ್ಟೇಟ್ ಯೋಜನೆಗಳು ಹಾಗೂ ಏಜೆಂಟರು ಆಯಾ ರಾಜ್ಯದ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು
  • ಯೋಜನೆಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು, ಸರ್ಕಾರದ ಬೇರೆ ಏಜೆನ್ಸಿಗಳಿಂದ ಪಡೆದ ಪರವಾನಗಿ, ಯೋಜನೆಯನ್ನು ಅಭಿವೃದ್ಧಿಪಡಿಸುವ ಭೂಮಿಯ ದರ್ಜೆ, ಲೇಔಟ್‍ನ ನಕ್ಷೆ ಇತ್ಯಾದಿ ವಿವರಗಳನ್ನು ಡೆವಲಪರ್‍ಗಳು ಹಂಚಿಕೊಳ್ಳಬೇಕು.
  • ಡೆವಲಪರ್‍ಗಳು ಯೋಜನಾ ವೆಚ್ಚದ ಶೇ.70ರಷ್ಟು ಪಾಲನ್ನು ಪ್ರತ್ಯೇಕ ಖಾತೆಯಲ್ಲಿ ಠೇವಣಿ ಇರಿಸಬೇಕು. ಇದು ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಬೇರೆ ಉದ್ದೇಶಕ್ಕೆ ಬಳಸದಂತೆ ನೋಡಿ ಕೊಳ್ಳುತ್ತದೆ.
  • ಬಿಲ್ಡರ್‍ಗಳು ಯೋಜನೆ ಕುರಿತ ಪ್ರಮುಖ ಮಾಹಿತಿಗಳನ್ನು ಗ್ರಾಹಕರಿಗೆ ಕೊಡಬೇಕು. ಖರೀದಿಸುವವರ ಸಮ್ಮತಿ ಇಲ್ಲದೆ ಲೇಔಟ್ ಇಲ್ಲವೇ ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ.
  • 500 ಚದರ ಮೀಟರ್(ಇಲ್ಲವೇ 8 ಫ್ಲ್ಯಾಟ್‍ಗಳು)ಗಿಂತ ಹೆಚ್ಚಿನ ಆಸ್ತಿಗಳು ರೇರಾ ವ್ಯಾಪ್ತಿಗೆ ಬರಲಿವೆ.
  • ಡೆವಲಪರ್‍ಗಳಿಗೆ ಅನುಮತಿ ಕೊಡುವ ಸ್ಥಳೀಯ ಅಧಿಕಾರಿಗಳು ಕೂಡ ಕಾಯಿದೆ ವ್ಯಾಪ್ತಿಗೆ ಬರುತ್ತಾರೆ. ಯೋಜನೆ ಯೋಜಿತ ರೀತಿಯಲ್ಲಿ ಮುಂದುವರಿಯುತ್ತಿದೆಯೇ ಎಂಬುದನ್ನು ಖಚಿತ ಪಡಿಸಿಕೊಂಡು, ಅನುಮತಿ ನೀಡುವ ಇಲ್ಲವೇ ನಿರಾಕರಿಸುವ ಅಧಿಕಾರ ಹೊಂದಿರುತ್ತಾರೆ.
  • ಯಾವುದೇ ಲೋಪ ಆಗಿದ್ದಲ್ಲಿ ಗ್ರಾಹಕರು ಅದನ್ನು ಗ್ರಾಹಕ ನ್ಯಾಯಾಲಯಗಳಲ್ಲಿ ಪ್ರಶ್ನಿಸಬಹುದು.
  • ಡೆವಲಪರ್‍ಗಳು ಕಾಯಿದೆಯನ್ನು ಉಲ್ಲಂಘಿಸಿದರೆ, ಅವರಿಗೆ ಮೂರು ವರ್ಷ ಜೈಲುವಾಸದ ಶಿಕ್ಷೆ ನೀಡಬಹುದು. ಗ್ರಾಹಕರು ಇಲ್ಲವೇ ಏಜೆಂಟ್‍ಗಳಿಗೆ ಒಂದು ವರ್ಷ ಸೆರೆ ವಾಸ ವಿಧಿ ಸಬಹುದು.
  • ಮೇಲ್ಮನವಿ ನ್ಯಾಯಾಧಿಕರಣದ ಮೂಲಕ ವಿವಾದಗಳನ್ನು ಶೀಘ್ರವಾಗಿ ಬಗೆಹರಿಸಬಹುದು

Read more:

Letter to Karnataka Chief Minister Siddaramaiah on RERA

Post a comment