nbf@namma-bengaluru.org
9591143888

ಅಭಿಯಾನಗಳು

ಬರದ ದ್ವಂದ್ವ:

ಬರ ಬಂದಾಗ ಪ್ರತಿ ಹನಿಯನ್ನೂ ಉಳಿಸಿ-ಪ್ರತಿ ದಿನ, ಎಲ್ಲ ರೀತಿಯಲ್ಲೂ

“ಸ್ವಾಭಾವಿಕ ಅವಘಡ’ ಎಂದರೆ ಆರ್ಭಟಿಸುತ್ತಿರುವ ಭೂಕಂಪ, ಭಾರಿ ಪ್ರವಾಹ, ಸರ್ವನಾಶ ಮಾಡುವ ಚಂಡಮಾರುತ ಇತ್ಯಾದಿ ಚಿತ್ರಣಗಳು ಕಣ್ಣಿನ ಮುಂದೆ ಬರುತ್ತವೆ. ಆದರೆ, ಬರ ಕೂಡ ಸರ್ವನಾಶ ಮಾಡಬಲ್ಲ ಸ್ವಾಭಾವಿಕ ಅವಘಡ. ಬರ ಎನ್ನುವುದು ಪಾರಿಸರಿಕ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿಷಯವಾಗಿದ್ದು, ಹವಾಮಾನ ಅಸ್ಥಿರತೆ ಹಾಗೂ ಊಹಿಸಲಾಗದಿರುವಿಕೆಯಿಂದ ದೇಶದಲ್ಲಿನ ದುರ್ಬಲರು ಗಂಭೀರ ಅಪಾಯ ಎದುರಿಸುತ್ತಿದ್ದಾರೆ.

ಭಾರತದ ಆರ್ಥಿಕತೆ ಹಾಗೂ ಜನರು ಮಳೆಯನ್ನೇ ಅತಿಯಾಗಿ ಆಶ್ರಯಿಸಿದ್ದಾರೆ. ಆದರೆ, ದಶಕಗಳಿಂದ ಕಾಣದ ತೀವ್ರ ಬಿಸಿಲು, ದಿಕ್ಕು ದೆಸೆಯಿಲ್ಲದೆ ಸುರಿಯುವ ಮಳೆ ಹಾಗೂ ನಾನಾ ಮೂಲಗಳಿದ್ದರೂ ನೀರಿನ ಕೊರತೆಯಿಂದ ರೈತರು, ಈ ಪ್ರದೇಶಗಳಲ್ಲಿ ವಾಸಿಸುವ ಜನರು ಹಾಗೂ ಸಾಕು ಪ್ರಾಣಿಗಳು ಅಪಾರ ಸಂಕಷ್ಟ ಎದುರಿಸಿದ್ದಾರೆ.

2016ರಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮ, ಬಿಸಿಲಿನ ಹೆಚ್ಚಳ ಹಾಗೂ ಮಳೆಗಾಲದ ಮುನ್ನ ಸುರಿಯುವ ಮಳೆಯ ಕೊರತೆಯಿಂದ ಗಂಭೀರ ಪರಿಸ್ಥಿತಿ ಎದುರಾಗಿತ್ತು. ರಾಜ್ಯದ ಹೆಚ್ಚು ಪಾಲು ಜನರು ಕೃಷಿಯನ್ನು ಆಧರಿಸಿದ್ದು, ಬೆಳೆ-ಇಳುವರಿ ವೈಫಲ್ಯ, ಆರ್ಥಿಕ ಅಸ್ಥಿರತೆ, ಜೀವ ಹಾನಿ, ಮೇವಿನ ಕೊರತೆ, ಪೋಷಕಾಂಶದ ಕೊರತೆ ಹಾಗೂ ಆರೋಗ್ಯ ಸಮಸ್ಯೆಯಿಂದ ಜನ ಸಂಕಷ್ಟಕ್ಕೆ ಈಡಾದರು.

ಕಳವಳಕಾರಿ ಅಂಕಿ-ಸಂಖ್ಯೆ:
ಹಾನಿಗೀಡಾದವರು-3.1 ಕೊಟಿ
ಬರಪೀಡಿತ ಎಂದು ಘೋಷಿಸಲ್ಪಟ್ಟ ಗ್ರಾಮಗಳು: 22,759
13 ಪ್ರಮುಖ ಜಲಾಶಯಗಳಲ್ಲಿ 7 ಬರಿದಾಗುವ ಭೀತಿ ಇಲ್ಲವೇ ಡೆಡ್ ಸ್ಟೋರೇಜ್ ಮಟ್ಟ ತಲುಪಿವೆ
ಬೆಂಗಳೂರಿನಲ್ಲಿ ಹೆಚ್ಚು ಆಳದ ಬಾವಿಗಳನ್ನು ಕೊರೆಯಲಾಗಿದೆ. 2005ರಿಂದ ನೀರಿನ ಮಟ್ಟ ನಗರ ಪ್ರದೇಶದಲ್ಲಿ ಆರು ಪಟ್ಟು ಹಾಗೂ ಗ್ರಾಮೀಣ ಕರ್ನಾಟಕದಲ್ಲಿ ಮೂರು ಪಟ್ಟು ಕುಸಿತ ಕಂಡಿದೆ.

ರಾಜ್ಯದಲ್ಲಿನ ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ 723 ಕೋಟಿ ರೂ. ಅನುದಾನ ನೀಡಿದ್ದರೂ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಈ ಹಿನ್ನೆಲೆಯಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬರಪೀಡಿತ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಿತು. 6,500 ಲೀಟರ್ ಸಾಮಥ್ರ್ಯದ 144 ಲೋಡ್ ನೀರನ್ನು ಕೆಳಕಂಡ ಹಳ್ಳಿಗಳಿಗೆ ಪೂರೈಸಲಾಯಿತು.

Water Supply from 16th May, 2016
DateVillagesTotal Loads Supplied
VaddarapalyaDyavasandraNosennuruN.Gollahalli
16-May-163111
17-May-162121
18-May-1622
19-May-16131
20-May-1641
21-May-165
22-May-16221
Total18311436
23-May-16212
24-May-16221
25-May-1632
26-May-16311
27-May-1632
28-May-16212
29-May-16321
Total18313236
30-May-16221
31-May-16212
01-Jun-1632
02-Jun-16221
03-Jun-1632
04-Jun-16311
05-Jun-16213
Total17214336
06-Jun-1632
07-Jun-16221
08-Jun-16212
09-Jun-16221
10-Jun-1632
11-Jun-16221
12-Jun-162121
Total16113636

Post a comment