nbf@namma-bengaluru.org
9591143888

Food Delivery Drive

NBF ಆಹಾರ ವಿತರಣೆ ನೆರವು

  Namma Bengaluru Foundation's Food Delivery Drive Namma Bengaluru Foundation's Food Delivery Drive

  ಕರೋನಾ ಲಾಕ್‍ಡೌನ್‍ನಿಂದ ಬೆಂಗಳೂರಿನಲ್ಲಿರುವ ವಸತಿರಹಿತರು, ಅಸಂಘಟಿತ ವಲಯದ ದಿನಗೂಲಿ ನೌಕರರು, ಮನೆ ಕೆಲಸದವರು, ಚಿಂದಿ ಆಯುವವರು, ರಿಕ್ಷಾ ಚಾಲಕರು, ಗಾಡಿಯಲ್ಲಿ ಮಾರಾಟ ಮಾಡುವ ವ್ಯಾಪಾರಿಗಳು, ಒಂಟಿ ತಾಯಂದಿರು, ನಿರ್ಮಾಣ ಕೆಲಸಗಾರರು ಹಾಗೂ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿನಿತ್ಯದ ಊಟಕ್ಕಾಗಿ ಪರದಾಡುತ್ತಿದ್ದಾರೆ. 28 ಮಾರ್ಚ್ 2020ರಂದು ಆರಂಭವಾದ ಎನ್‍ಬಿಎಫ್‍ನ ಫುಡ್ ಡೆಲಿವರಿ ಡ್ರೈವ್, ಇಂಥ ದುರ್ಬಲರು ಹಾಗೂ ಅಂಚಿನಲ್ಲಿರುವವರನ್ನು ತಲುಪಿದೆ, ತಲುಪುತ್ತಿದೆ.

  ಈ ಉಪಕ್ರಮವು ಅಗತ್ಯವಿರುವವರಿಗೆ ಆಹಾರದ ಪೊಟ್ಟಣ ಹಾಗೂ ಕುಟುಂಬಗಳಿಗೆ ದಿನಸಿ ಚೀಲ ನೀಡುತ್ತಿದೆ. ದಾನಿಗಳು ಹಾಗೂ ಸಹಭಾಗಿ ಸಂಸ್ಥೆಗಳ ನೆರವಿನಿಂದ ಸಾಧ್ಯವಾಗಿರುವ ಈ ಅಂದೋಲನವನ್ನು ಸಂಸದ ರಾಜೀವ್ ಚಂದ್ರಶೇಖರ್ ಬೆಂಬಲಿಸಿದ್ದಾರೆ. ಏಪ್ರಿಲ್ 25, 2020 ರವರೆಗೆ ಈ ಆಂದೋಲನ ಬೆಂಗಳೂರಿನ 40 ಪ್ರದೇಶಗಳ 21,000 ಜನರನ್ನು ತಲುಪಿದ್ದು, 1.25 ಲಕ್ಷ ಆಹಾರ ಪೊಟ್ಟಣಗಳು, 2,500 ದಿನಸಿ ಕಿಟ್‍ಗಳು ಹಾಗೂ ಮಕ್ಕಳಿಗೆ 3,500 ತಿನಿಸಿನ ಪ್ಯಾಕೆಟ್ ವಿತರಿಸಲಾಗಿದೆ.

  ನಾವು ದಾನಿಗಳಾದ ಶ್ರೀ ರಾಜೀವ್ ಚಂದ್ರಶೇಖರ್, ಜೈನ್ ಅಂತಾರಾಷ್ಟ್ರೀಯ ವ್ಯಾಪಾರ ಸಂಘಟನೆ(ಜೆಐಟಿಓ), ಏಟ್ರಿಯಾ ಫೌಂಡೇಷನ್, ದೇಸಿ ಮಸಾಲಾ, ಭಾಸ್ಕರ್ಸ್ ಹೋಳಿಗೆ ಮನೆ, ಗಿಲ್ಗಲ್ ಚಾರಿಟಬಲ್ ಟ್ರಸ್ಟ್, ಅವಾಸ್(ಎವಿಎಎಸ್), ಸತ್ಸಂಗ್ ಫೌಂಡೇಷನ್ ಹಾಗೂ ವೈಯಕ್ತಿಕವಾಗಿ ನೆರವು ನೀಡಿದ ಶ್ರೀ ಶ್ರೀರಾಮ್ ಸುಬ್ರಮಣ್ಯಂ ಮತ್ತು ಸಿರೂರ್ ಕುಟುಂಬ ಹಾಗೂ ಇನ್ನಿತರರಿಗೆ ಧನ್ಯವಾದ ಸಲ್ಲಿಸುತ್ತೇವೆ. ಇವರೆಲ್ಲರ ನೆರವಿಲ್ಲದೆ ಈ ಆಂದೋಲನ ಸಾಧ್ಯವಾಗುತ್ತಿರಲಿಲ್ಲ.

  ಇನ್ನೂ ಸಾವಿರಾರು ಜನರನ್ನು ತಲುಪಬೇಕಿದೆ. ನೀವು ಕೂಡ ಕೈಯಲ್ಲಾದ ಸಹಾಯ ಮಾಡಬಹುದು:
   
  ಪ್ರತಿ ಕುಟುಂಬಕ್ಕೆ ದಿನಸಿ ಕಿಟ್(7 ಕೆಜಿ ಅಕ್ಕಿ, ಅಡುಗೆ ಎಣ್ಣೆ 1 ಲೀಟರ್, ಬೇಳೆ 1 ಕೆಜಿ, ಉಪ್ಪು 1 ಕೆಜಿ, ಹಿಟ್ಟು 2 ಕೆಜಿ, ಸಕ್ಕರೆ 1 ಕೆಜಿ ಹಾಗೂ ಎರಡು ಸೋಪ್) 4-5 ಸದಸ್ಯರಿರುವ ಪ್ರತಿ ಕುಟುಂಬಕ್ಕೆ. ಇದು ಅಂದಾಜು ಎರಡು ವಾರಕ್ಕೆ ಸಾಕಾಗಲಿದೆ. ಪ್ರತಿ ಕಿಟ್ ವೆಚ್ಚ 800 ರೂ.(ಪ್ರತಿ ಕುಟುಂಬಕ್ಕೆ).
  ಹಣವನ್ನು ಕೂಡ ನೀಡಬಹುದು. 80ಜಿ ಅಡಿ ಆದಾಯ ತೆರಿಗೆ ವಿನಾಯಿತಿ ಇದೆ. ಹಣವನ್ನು ಆನ್‍ಲೈನ್(ಆರ್‍ಟಿಜಿಎಸ್/ಎನ್‍ಇಎಫ್‍ಟಿ) ಮೂಲಕ ಎನ್‍ಬಿಎಫ್ ಟ್ರಸ್ಟ್ ಖಾತೆಗೆ ಸಂದಾಯ ಮಾಡಬಹುದು:

  ಖಾತೆ ಹೆಸರು: ನಮ್ಮ ಬೆಂಗಳೂರು ಫೌಂಡೇಷನ್

  ಉಳಿತಾಯ ಖಾತೆ ಸಂಖ್ಯೆ: 520101253850351

  ಉಳಿತಾಯ ಖಾತೆ

  ಐಎಫ್‍ಎಸ್ ಕೋಡ್:  CORP0000341

  ಬ್ಯಾಂಕ್: ಕಾರ್ಪೊರೇಷನ್ ಬ್ಯಾಂಕ್

  ಶಾಖೆ: ಎಂ.ಜಿ. ರಸ್ತೆ

  ವಿವರಕ್ಕಾಗಿ ಸಂಪರ್ಕಿಸಿ: ಉಷಾ ಧನರಾಜ್ 9591143888/ 9591985287 ಅಥವಾ ಹರೀಶ್ 6362642704

  Post a comment