ಕಳೆದ ಕೆಲವು ವರ್ಷಗಳಿಂದ “ಬೆಳ್ಳಂದೂರು ಕೆರೆ ರಕ್ಷಿಸಿ’ ಎನ್ನುವ ಕೂಗು ಆಗಾಗ ಕೇಳಿಬರುತ್ತಿದೆ. ಆದರೆ, ದುರದೃಷ್ಟವಶಾತ್ ಈ ಎಲ್ಲ ದನಿಗಳು ಮಾಲಿನ್ಯ, ವಿಷವಸ್ತುವಿನಿಂದ ತುಂಬಿದ ಹಾಗೂ ಸಾಯುತ್ತಿರುವ ಕೆರೆಯಲ್ಲಿ ಯಾವುದೇ ಬದಲಾವಣೆ ತಾರದೆ, ಕ್ರಮೇಣ ಕ್ಷೀಣವಾಗಿವೆ. ಬೆಳ್ಳಂದೂರು ಕೆರೆಯ ರಕ್ಷಣೆಗೆ ಹೋರಾಡಿದವರು ಹಾಗೂ ಕೆರೆ ಪುನರುಜ್ಜೀವಗೊಳ್ಳಲಿ ಎಂದು ಪ್ರಾರ್ಥಿಸಿದ ಇಬ್ಬರಿಗೂ ಬೆಂಗಳೂರಿನ ಈ ಅತಿ ದೊಡ್ಡ ಕೆರೆ ಹೊಸ ಜೀವ ಪಡೆಯುವ ಭರವಸೆಯಿದೆ.
ಕೆರೆ ಪರಿಣತರು, ಕ್ರಿಯಾಶೀಲ ಕಾರ್ಯಕರ್ತರು ಮತ್ತು ಕಾಳಜಿ ಇರುವ ನಾಗರಿಕರ ಒಕ್ಕೂಟಗಳು ನಮ್ಮ ಬೆಂಗಳೂರು ಫೌಂಡೇಷನ್‍ನ ಜತೆಗೂಡಿ, ಕೆರೆಯನ್ನು ಉಳಿಸುವ, ಪುನರುಜ್ಜೀವ ಗೊಳಿಸುವ ಹಾಗೂ ಸಶಕ್ತಗೊಳಿಸಲು ಹಲವು ಪರಿಹಾರಗಳಿರುವ ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸಿವೆ: ಅದೇ #ಸೇವ್ ಬೆಳ್ಳಂದೂರ್ ಲೇಕ್ ಆಕ್ಷನ್ ಪ್ಲಾನ್. ಈ ಪ್ರಾಯೋಗಿಕ ಹಾಗೂ ಕಾರ್ಯಸಾಧು ಕ್ರಿಯೆಗಳಿಂದ ಕೆರೆ ಮತ್ತೆ ಜೀವ ಪಡೆದುಕೊಳ್ಳುವಂತೆ ಮಾಡಬಹುದಾಗಿದೆ.
ನಾಗರಿಕ ಒಕ್ಕೂಟದ ಪರವಾಗಿ “ಬೆಳ್ಳಂದೂರು ರಕ್ಷಿಸಿ ಕ್ರಿಯಾಯೋಜನೆ’ ಪರಿಹಾರಗಳ ದಾಖಲೆಯನ್ನು ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಶ್ರೀ ಕೆ.ಜೆ. ಜಾರ್ಜ್ ಅವರಿಗೆ ಸಂಸದರಾದ ರಾಜೀವ್ ಚಂದ್ರಶೇಖರ್, ಪಿ.ಸಿ. ಮೋಹನ್ ಮತ್ತು ರಾಜೀವ್ ಗೌಡ, ಶಾಸಕ ಸತೀಶ್ ರೆಡ್ಡಿ, ಗ್ರಾಮದ ಪ್ರತಿನಿಧಿಗಳು ಹಾಗೂ ಇನ್ನಿತರ ಸರ್ಕಾರಿ ಅಧಿಕಾರಿಗಳಿಗೆ ಏಪ್ರಿಲ್ 13, 2016ರಂದು ನೀಡಲಾಯಿತು.
ಆನಂತರ ಸರ್ಕಾರ ಆಯೋಜಿಸಿದ ಸೇವ್ ಬೆಳ್ಳಂದೂರು ಕಾರ್ಯಾಗಾರದಲ್ಲಿ ಹಲವು ಪರಿಹಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಕಾರ್ಯಾಗಾರದ ಕೊನೆಯಲ್ಲಿ ಕೆ.ಜೆ. ಜಾರ್ಜ್ ಅವರು ನಗರಾಭಿ ವೃದ್ಧಿ ಇಲಾಖೆಯ ಹೆಚ್ಚುವರಿ ಜಂಟಿ ಕಾರ್ಯದರ್ಶಿ ಮಹೇಂದ್ರ ಜೈನ್ ನೇತೃತ್ವದ ಬೆಳ್ಳಂದೂರು ಕೆರೆ ರಕ್ಷಿಸಿ ಸಮಿತಿಯನ್ನು ಘೋಷಿಸಿದರು. ಸಮಿತಿ ಕೆರೆಯ ಪುನಶ್ಚೇತನಕ್ಕೆ ಕಾರ್ಯಸಾಧ್ಯ ಪರಿಹಾರಗಳನ್ನು ಸೂಚಿಸಿತು ಹಾಗೂ ವರದಿಯನ್ನು ಕೆ.ಜೆ. ಜಾರ್ಜ್ ಅವರಿಗೆ ಸಲ್ಲಿಸಲಾಯಿತು. ಸಮಿತಿ ತನ್ನ ವರದಿಯಲ್ಲಿ ಸೂಚಿಸಿದ ತಾತ್ಕಾಲಿಕ ಪರಿಹಾರಗಳಿಗೆ ಅನುಗುಣವಾಗಿ ಕೆರೆಯನ್ನು ಪುನರುಜ್ಜೀವಗೊಳಿಸುವ ಕೆಲಸಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಟೆಂಡರ್ ಕರೆಯಬೇಕಿದೆ.
ಪರಿಹಾರಗಳನ್ನು ಅನುಷ್ಠಾನಗಳಿಸುವ ಮೂಲಕ ಕೆರೆಯನ್ನು ಪುನರುಜ್ಜೀವಗೊಳಿಸಲಾಗುತ್ತದೆ ಎಂದು ಎನ್‍ಬಿಎಫ್ ಭರವಸೆಯಿಟ್ಟಿದೆ.
Read more
Post a comment