ಬೆಳ್ಳಂದೂರು ಕೆರೆಯ ನಾಶ ನಮ್ಮಗಳ ಬೆಂಗಳೂರಿನ ದುರ್ಬಳಕೆಯ ಉತ್ತಮ ಉದಾಹರಣೆ. ಸರ್ಕಾರ, ನಾಗರಿಕರು ಹಾಗೂ ನಾಗರಿಕ ಸಮಾಜ ಒಟ್ಟಾಗಿ ಇಂಥ ವಾಸ್ತವಿಕ ಸವಾಲುಗಳನ್ನು ಎದುರಿಸುವುದರಲ್ಲಿ ಹಾಗೂ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಯೋಜಿತವಲ್ಲದ ಅಭಿವೃದ್ಧಿಯನ್ನು ತಡೆಯಲು ಜನ ಒಟ್ಟಾಗುವುದರಲ್ಲಿ ನಗರದ ಭವಿಷ್ಯ ಇದೆ. ನಮ್ಮ ಬೆಂಗಳೂರು ಪ್ರತಿಷ್ಠಾನದ ಆಶ್ರಯದಲ್ಲಿ ನಾಗರಿಕರು, ತಜ್ಞರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಂಯೋಜಿತ ಹಾಗೂ ಶ್ರಮದಾಯಕ ಸಂಯೋಜಿತ ಪ್ರಯತ್ನವೇ ಬೆಳ್ಳಂದೂರು ರಕ್ಷಿಸಿ ಕ್ರಿಯಾಯೋಜನೆ. ಈ ಪ್ರಯತ್ನದಲ್ಲಿ ಪ್ರತಿಯೊಬ್ಬರೂ ನಮ್ಮೊಡನೆ ಕೈ ಜೋಡಿಸಬೇಕು ಹಾಗೂ ಬೆಳ್ಳಂದೂರು ಕೆರೆಯ ಗತ ವೈಭವ ಮರುಕಳಿಸುವಂತೆ ಮಾಡುವವರೆಗೆ ಕ್ರಿಯಾಶೀಲರಾಗಬೇಕು ಎಂದು ಕೋರು ತ್ತೇವೆ. ಈ ದಾಖಲೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಲ ಸಂರಕ್ಷಣೆಯನ್ನು ಸಂವರ್ಧಿಸಲು ಹಾಗೂ ಪಾರಿಸರಿಕ ಸಮತೋಲವನ್ನು ಮತ್ತೆ ಸ್ಥಾಪಿಸಲು ಆಧಾರವಾಗುವ ಮೂಲಕ ಬೇರೆ ನಗರಗಳ ಸುಸ್ಥಿರ ಅಭಿವೃದ್ಧಿಯ ಬೆಳಕಿಂಡಿಯಾಗುವ ಸಾಧ್ಯತೆ ಯಿದೆ.
Post a comment