ಪ್ರಮುಖ ಸಮಸ್ಯೆಗಳ ಕುರಿತು ಸರ್ಕಾರವನ್ನು ಎಚ್ಚರಿಸುವಲ್ಲಿ ಸದಾ ಮುಂಚೂಣಿ
ನಮ್ಮ ಬೆಂಗಳೂರು ಫೌಂಡೇಶನ್’ನ ಭಾಗವಾಗಿರುವುದಕ್ಕೆ ಹೆಮ್ಮೆ ಎನಿಸಿದೆ. ಸಮಾಜದಲ್ಲಿ ತಲೆದೋರಿರುವ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಮುಂಚೂಣಿಯಲ್ಲಿರುವ ಇವರು, ಸಮಸ್ಯೆಗಳ ಇತ್ಯರ್ಥಕ್ಕಾಗಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಇಡುವ ಪ್ರತೀ ಹೆಜ್ಜೆಯೂ ಅಚ್ಚರಿ ಮೂಡಿಸುವಂತದ್ದು. ಕರೆಗಳ ಪುನರುಜ್ಜೀವನಕ್ಕಾಗಿ ಇವರ ಪರಿಶ್ರಮ, ರೇರಾ ಅನುಷ್ಠಾನ ಮತ್ತು ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಇವರ ಸೇವೆ ಶ್ಲಾಘನೀಯ.