nbf@namma-bengaluru.org
9591143888

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣ

ಫೆಬ್ರವರಿ 2017ರಲ್ಲಿ ಸಂಭವಿಸಿದ ಕುಖ್ಯಾತ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣದಿಂದ ನಗರದ ಅತಿ ದೊಡ್ಡ ಕೆರೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಸರ್ಕಾರದ ನಿರ್ಲಕ್ಷ್ಯದಿಂದ ಜನ ಸಿಟ್ಟಿಗೆದ್ದರು. ಇದನ್ನು ಪರಿಗಣಿಸಿದ ನಮ್ಮ ಬೆಂಗಳೂರು ಪ್ರತಿಷ್ಠಾನ ವು ಬೆಳ್ಳಂದೂರು ಕೆರೆ ಬೆಂಕಿ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಮನವಿ ಸಲ್ಲಿಸಿತು.

ಎನ್ಬಿಎಫ್ ಸಲ್ಲಿಸಿದ ಅರ್ಜಿಯಲ್ಲಿ:

•      ಕೆರೆಯಲ್ಲಿ ಬೆಂಕಿ ಪ್ರಕರಣ ಇದೇ ಮೊದಲ ಬಾರಿ ನಡೆದ ಅಥವಾ ಏಕೈಕ ಪ್ರಕರಣವಲ್ಲ. ಕೆರೆ ಏರಿಯಲ್ಲಿ ಮುನ್ಸಿಪಲ್ ಘನ ತ್ಯಾಜ್ಯ ಹಾಗೂ ತ್ಯಾಜ್ಯದ ದಹನದಿಂದ ಇಂಥ ಹಲವು ಪ್ರಮುಖ ಹಾಗೂ ಸಣ್ಣ ಬೆಂಕಿ ಪ್ರಕರಣಗಳು ಸಂಭವಿಸಿವೆ. ಅಗ್ನಿಶಾಮಕ ಇಲಾಖೆ ಕೆರೆ ಏರಿಯಲ್ಲಿ ಆಗಾಗ ಬೆಂಕಿಯನ್ನು ಆರಿಸಿದೆ. ತ್ಯಾಜ್ಯದ ದಹನ ಹಾಗೂ ಬೆಂಕಿ ಪ್ರಕರಣಗಳಿಂದ ಈ ಪ್ರದೇಶದ ಗಾಳಿಯ ಗುಣಮಟ್ಟ ಕುಸಿದಿದೆ. ಆದರೆ, ಅಧಿಕಾರಿಗಳು ಪರಿಸರದ ಬಗ್ಗೆ ನಿರ್ಲಕ್ಷ್ಯ ತಳೆದಿದ್ದಾರೆ.

• ಪ್ರಸ್ತುತ ಕೆರೆಯ ಸ್ಥಿತಿ ಗಂಭೀರವಾಗಿದೆ ಹಾಗೂ ಎನ್ಬಿಎಫ್ನ #ಬೆಳ್ಳಂದೂರು ಕೆರೆಯನ್ನು ರಕ್ಷಿಸಿ ವರದಿ’s #SaveBellandur Action Plan Report ಯ ಶಿಫಾರಸುಗಳು ಹಾಗೂ ಕರ್ನಾಟಕ ಸರ್ಕಾರದ ತಜ್ಞರ ವರದಿ’s Expert’s Committee Report.

ಯನ್ವಯ ತತ್ಕ್ಷಣ ನಿವಾರಣೆ ಕ್ರಮಗಳನ್ನು ಕೈಗೊಂಡು, ಕೆರೆಯನ್ನು ಉಳಿಸಬೇಕಿದೆ.

•      ಕೆರೆಯನ್ನು ಪ್ರವೇಶಿಸುತ್ತಿರುವ ಪರಿಷ್ಕರಿಸಿದ/ಪರಿಷ್ಕರಿಸದ ನೀರಿನ ಪ್ರಮಾಣವೆಷ್ಟು ಎನ್ನುವ ಮಾಹಿತಿಯಿಲ್ಲ. ಎಲ್ಲ ಅಂದಾಜುಗಳು ಹಳೆಯ ಅಂಕಿಸಂಖ್ಯೆಯನ್ನು ಆಧರಿಸಿವೆ..

ಪ್ರಸ್ತುತ ಪರಿಸ್ಥಿತಿ ಮತ್ತು ಕಾಲಾನುಕ್ರಮಣಿಕೆ

ಜನವರಿ 29,2018: ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಪ್ರಕರಣದ ವಿಚಾರಣೆ ನಡೆಸಿದ ಎನ್ಜಿಟಿ, ರಾಜ್ಯ ಸಲ್ಲಿಸಿದ ಕ್ರಿಯಾಯೋಜನೆಯ ಆಧಾರದಲ್ಲಿ ಮಧ್ಯಂತರ ನಿರ್ದೇಶನಗಳನ್ನು ನೀಡಿತು. ಅವುಗಳೆಂದರೆ,

The directions passed are as follows:

1) ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಿಗೆ ತ್ಯಾಜ್ಯವನ್ನು ತುಂಬುತ್ತಿರುವ 99 ಅಪಾರ್ಟ್ಮೆಂಟ್ ಸಂಕೀರ್ಣಗಳಿಗೆ ಕೆಎಸ್ಪಿಸಿಬಿ ನೋಟಿಸ್ ನೀಡಬೇಕು: ಲಭ್ಯವಿರುವ ಸ್ಥಳದಲ್ಲಿ ರಾಚನಿಕ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ, ಮಾಡ್ಯುಲಾರ್ ತ್ಯಾಜ್ಯ ಸಂಸ್ಕರಣೆ ಘಟಕ(ಎಟಿಪಿ)ಗಳನ್ನು ಅಳವಡಿಸಿಕೊಳ್ಳಬೇಕೆಂದು ಸೂಚಿಸಬೇಕು ಎಂದು ಆದೇಶಿಸಿತು.

2) ಕೈಗಾರಿಕಾ ಮಾಲಿನ್ಯ/ತ್ಯಾಜ್ಯಗಳು ಬೆಳ್ಳಂದೂರು, ವರ್ತೂರು ಹಾಗೂ ಆಗರದ ಕೆರೆಗಳಿಗೆ ಪ್ರವೇಶಿಸದಂತೆ ಕಾವಲು ಕಾಯಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿತು.

3) ಬೆಂಕಿ ಹೊತ್ತಿಕೊಳ್ಳಲು ಕಾರಣ ಎಂದು ನಂಬಲಾದ ಮ್ಯಾಕ್ರೋಫೈಟ್(ತೇಲಾಡುವ ಒಣ ಹುಲ್ಲು/ಅಂತರಗಂಗೆ)ನ್ನು ಕಿತ್ತು ಹಾಕಿ, ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ತಿಂಗಳು ವರದಿ ಸಲ್ಲಿಸಬೇಕೆಂದು ಸೂಚಿಸಿತು.

4) ಮ್ಯಾಕ್ರೋಫೈಟ್ಗಳ ಜೀವನವೃತ್ತ ಹಾಗೂ ಅವುಗಳ ಜೈವಿಕ ನಿವಾರಣೆ/ಕೀಳುವಿಕೆ ಹಾಗೂ ಹೂಳು ತುಂಬುವಿಕೆ ಕುರಿತು ಅಧ್ಯಯನ ನಡೆಸಬೇಕೆಂದು ಬೆಂಗಳೂರಿನ ಐಐಎಸ್ಸಿಯನ್ನು ಕೋರಿತು.

5) ವರ್ತೂರು ಹಾಗೂ ಆಗರದ ಕೆರೆಗಳ ಕುರಿತು ಕ್ರಿಯಾಯೋಜನೆಯನ್ನು ಸಿದ್ಧಗೊಳಿಸಬೇಕು ಹಾಗೂ ಮುನ್ಸಿಪಲ್ ತ್ಯಾಜ್ಯ ಹಾಗೂ ಇನ್ನಿತರ ತ್ಯಾಜ್ಯದ ನಿರ್ವಹಣೆ ಬಗ್ಗೆ ಕ್ರಿಯಾಯೋಜನೆ ತಯಾರಿಸಿ, ಸಲ್ಲಿಸಬೇಕೆಂದು ನಿರ್ದೇಶನ ನೀಡಿತು.

ಆಗಸ್ಟ್ 17,2017: ನಮ್ಮ ಬೆಂಗಳೂರು ಪ್ರತಿಷ್ಠಾನವು ಬೆಳ್ಳಂದೂರು ಕೆರೆಯ ನೊರೆಯ ಫೋಟೋಗಳನ್ನು ಎನ್ಜಿಟಿಗೆ ಸಲ್ಲಿಸಿದ ಒಂದು ದಿನದ ಬಳಿಕ(ಆಗಸ್ಟ್ 15) ಭಾರಿ ಮಳೆ ಸುರಿಯಿತು. ಕರ್ನಾಟಕ ಸರ್ಕಾರ ತನ್ನ ಪ್ರತಿಕ್ರಿಯೆಯಲ್ಲಿ ಈ ವಾರದ “ಕಂಡುಕೇಳರಿಯದ’ ಪರಿಸ್ಥಿತಿಗೆ “ಮೇಘ ಸ್ಪೋಟ’ ಕಾರಣ ಎಂದು ದೂಷಿಸಿತು. ಆದರೆ, ನಗರದ ಪ್ರಸ್ತುತ ಸ್ಥಿತಿ ಬಗ್ಗೆ ಪ್ರಕಟವಾದ ವರದಿಗಳ ಅರಿವಿದ್ದ ನ್ಯಾಯಾಧಿಕರಣವು,”ಮೇಘ ಸ್ಪೋಟದಿಂದ ನೊರೆ ಹಾಗೂ ಹೊಗೆ ಸೃಷ್ಟಿಯಾಗುವುದಿಲ್ಲ’ ಎಂದು ಖಂಡಿಸಿದ್ದಲ್ಲದೆ, ರಾಜ್ಯಕ್ಕೆ ನಾಲ್ಕು ಪ್ರಶ್ನೆಗಳನ್ನು ಕೇಳಿ, ಆಗಸ್ಟ್ 22,2017ರೊಳಗೆ ಉತ್ತರ ನೀಡಬೇಕೆಂದು ಸೂಚಿಸಿತು.

1) ಎಷ್ಟು ರಾಜಕಾಲುವೆಗಳನ್ನು ಹೂಳು ತೆಗೆದು ಸ್ವಚ್ಛಗೊಳಿಸಿದ್ದೀರಿ?
2) ರಾಜಕಾಲುವೆಗಳಿಂದ ಅದರಲ್ಲೂ ಕೆರೆಗಳಿಂದ ಎಷ್ಟು ತ್ಯಾಜ್ಯವನ್ನು ಸಂಗ್ರಹ ಮಾಡಿದ್ದೀರಿ?
3) ತೆಗೆದ ತ್ಯಾಜ್ಯವನ್ನು ಎಲ್ಲಿ ಸುರಿದಿದ್ದೀರಿ?
4) ನೀವು ತೆಗೆದುಕೊಂಡ ಮುಂಜಾಗ್ರತೆ ಕ್ರಮಗಳೇನು?

ರಾಜ್ಯ ನೀಡಿದ ಉತ್ತರವನ್ನು ನ್ಯಾಯಾಧಿಕರಣ ನೇಮಿಸಿದ ನ್ಯಾಯಾಲಯದ ಆಯುಕ್ತರು ಪರಿಶೀಲಿಸುತ್ತಾರೆ. ಅಷ್ಟು ಮಾತ್ರವಲ್ಲದೆ, ಮುಂದಿನ ವಿಚಾರಣೆ ನಡೆಯಲಿರುವ ಆಗಸ್ಟ್ 22, 2017ರಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಖುದ್ದು ಹಾಜರಿರಬೇಕು ಎಂದು ಆದೇಶಿಸಿತು. ಹೆಚ್ಚಿನ ಮಾಹಿತಿಗೆ (Read more)

ಆಗಸ್ಟ್ 8,2017: ಬೆಳ್ಳಂದೂರು ಕೆರೆಯ ರಕ್ಷಣೆಗೆ ಮುಂದಾದ ಸುಪ್ರೀಂ ಕೋರ್ಟ್, ಜೂನ್ 15,2017ರ ಕರ್ನಾಟಕ ಹೈಕೋರ್ಟ್ನ ಆದೇಶಕ್ಕೆ ತಡೆ ನೀಡಿತು. ದಿಲ್ಲಿಯಲ್ಲಿರುವ ಎನ್ಜಿಟಿಯ ಪ್ರಧಾನ ಪೀಠದ ವ್ಯಾಪ್ತಿಗೆ ಈ ಪ್ರಕರಣ ಬರುವುದಿಲ್ಲ. ಚೆನ್ನೈ ಇಲ್ಲವೇ ನ್ಯಾಯಾಧಿಕರಣದ ದಕ್ಷಿಣದ ಪೀಠ ಈ ಕುರಿತು ವಿಚಾರಣೆ ನಡೆಸಬೇಕು ಎಂದು ಹೇಳಿದ್ದ ಕರ್ನಾಟಕ ಹೈಕೋರ್ಟ್, ಎನ್ಜಿಟಿಯಲ್ಲಿ ವಿಚಾರಣೆಗೆ ತಡೆ ನೀಡಿತ್ತು. ಸುಪ್ರೀಂ ಕೋರ್ಟ್ನ ಮಧ್ಯಪ್ರದೇಶದಿಂದ ಎನ್ಜಿಟಿ ಪ್ರಕರಣದ ವಿಚಾರಣೆಯನ್ನು ಮುಂದುವರಿಸಲು ಅನುಮತಿ ಸಿಕ್ಕಿತಲ್ಲದೆ, ಬೆಳ್ಳಂದೂರು ಮಾತ್ರವಲ್ಲದೆ ಬೆಂಗಳೂರಿನ ಎಲ್ಲ ಕೆರೆಗಳಿಗೆ ರಕ್ಷಣೆ ಸಿಕ್ಕಿದಂತೆ ಆಯಿತು. ಹಸಿರು ನ್ಯಾಯಾಧಿಕರಣದ ಆದೇಶದಿಂದಾಗಿ ಕೆಎಸ್ಪಿಸಿಬಿ ಬಾಗಿಲು ಮುಚ್ಚಿಸುತ್ತದೆ ಎನ್ನಲಾದ ಶಶಿ ಡಿಸ್ಟಿಲ್ಲರೀಸ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿತ್ತು. ಹೆಚ್ಚಿನ ಮಾಹಿತಿಗೆ:( (Read more)

ಮೇ 18,2017: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಬೆಳ್ಳಂದೂರು ಕೆರೆಯನ್ನು ಉಳಿಸಲು “100-200 ಪುಟಗಳ ವರದಿ ಮಾಡುತ್ತ ಸಮಯ ವ್ಯರ್ಥ ಮಾಡಬೇಡಿ. ಅದರ ಬದಲು ಕೆಲಸ ಮಾಡಿ’ ಎಂದು ರಾಜ್ಯಕ್ಕೆ ಸಲಹೆ ನೀಡಿತು. ಕೆರೆ ಸುತ್ತಮುತ್ತಲಿನ ಎಲ್ಲ ಕೈಗಾರಿಕೆಗಳು ಇಟಿಪಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಲು ಕೆಎಸ್ಪಿಸಿಬಿ, ಬಿಡಿಎ ಹಾಗೂ ಬಿಡಬ್ಲ್ಯುಎಸ್ಎಸ್ಬಿ ಒಳಗೊಂಡ ಜಂಟಿ ಪರಿಶೋಧನಾ ತಂಡಕ್ಕೆ ನಿರ್ದೇಶಿಸಿತು. ಒಂದು ವೇಳೆ ತಾರ್ಕಿಕ ಅವಧಿಯೊಳಗೆ ಇಟಿಪಿ ಅಳವಡಿಸಿಕೊಳ್ಳದೆ ಹೋದರೆ, ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಡಿತಗೊಳಿಸಿ, ಕಾರ್ಖಾನೆಗಳನ್ನು ಮುಚ್ಚಿಸಬೇಕೆಂದು ಆದೇಶಿಸಿತು. ಬೆಳ್ಳಂದೂರು ಕೆರೆ ಸುತ್ತಮುತ್ತಲಿನ ಅಪಾರ್ಟ್ಮೆಂಟ್ಗಳು ಹಾಗೂ ವಸತಿ ಸಂಕೀರ್ಣಗಳು ನಿಗದಿಗೊಳಿಸಿದ ಕಾಲಾವಧಿಯೊಳಗೆ ಎಸ್ಟಿಪಿಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ಕಡಿತಗೊಳಿಸಬೇಕು ಎಂದು ನಿರ್ದೇಶಿಸಿತು. ಹೆಚ್ಚಿನ ವಿವರ (Read more)

ಏಪ್ರಿಲ್ 19,2017: ಬೆಂಗಳೂರಿಗರಿಗೆ ಸ್ಮರಣೀಯ ಎನ್ನಬಹುದಾದ ಘಳಿಗೆಯೊಂದರಲ್ಲಿ ಎನ್ಜಿಟಿ, ಬೆಳ್ಳಂದೂರು ಕೆರೆಯ ಸಂರಕ್ಷಣೆಗೆ ಕಠಿಣವಾದ ಮಧ್ಯಂತರ ನಿರ್ದೇಶನಗಳನ್ನು ನೀಡಿತು. ಬೆಳ್ಳಂದೂರು ಕೆರೆ ಕುರಿತ ಬಿಬಿಎಂಪಿ ಸುತ್ತೋಲೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಪತ್ರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧಿಕರಣ, ಎರಡೂ £ಸಂಸ್ಥೆಗಳು ತಕ್ಷಣ ಬೇಷರತ್ ಕ್ಷಮೆಯಾಚನೆ ಮಾಡಬೇಕು ಹಾಗೂ ಪತ್ರಗಳನ್ನು ತಕ್ಷಣ ವಾಪಸ್ ತೆಗೆದುಕೊಳ್ಳಬೇಕು ಎಂದು ಸೂಚಿಸಿತು. ಸಾಯುತ್ತಿರುವ ಕೆರೆಯ ನೆರವಿಗೆ ಧಾವಿಸಿದ ನ್ಯಾಯಾಧಿಕರಣ, ಕೆರೆ ಸುತ್ತಲಿನ ಎಲ್ಲ ಕೈಗಾರಿಕೆಗಳನ್ನು ಮುಚ್ಚುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿತು. ಹೆಚ್ಚಿನ ಮಾಹಿತಿ, (Read more)

View: Snapshot of NGT’s interim directions to save Bellandur Lake

ಮಾರ್ಚ್ 20,2017: ಮೇ 14, 2017ರ ತೀರ್ಪಿನಲ್ಲಿನ ನಿರ್ದೇಶನಗಳ ಪಾಲನೆಯಾಗುತ್ತಿದೆಯೇ ಎಂಬ ಕುರಿತು ವರದಿ ಸಲ್ಲಿಸಬೇಕೆಂದು ಇಬ್ಬರು ಬಿಲ್ಡರ್ಗಳಾದ ಮಂತ್ರಿ ಟೆಕ್ಝೋನ್ ಪ್ರೈವೇಟ್ ಲಿಮಿಟಿಡ್ ಹಾಗೂ ಕೋರ್ಮೈಂಡ್ ಸಾಫ್ಟ್ವೇರ್ ಆಂಡ್ ಸರ್ವೀಸಸ್ ಪ್ರೈವೇಟ್ ಲಿಮಿಟಿಡ್ಗೆ ನ್ಯಾಯಾಧಿಕರಣ ಸೂಚಿಸಿತು. ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ಗೆ ವಹಿಸಬೇಕೆಂಬ ಶ್ರೀ ಕುಪೇಂದ್ರ ರೆಡ್ಡಿ ಅವರ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧಿಕರಣ, ಅರ್ಜಿಯನ್ನು ಮತ್ತೊಮ್ಮೆ ಸಲ್ಲಿಸಬೇಕೆಂದು ನಿರ್ದೇಶಿಸಿತು.

ಇದಕ್ಕೆ ಮುನ್ನ ಕೆಎಸ್ಪಿಸಿಬಿ, ಕೆಎಲ್ಸಿಡಿಎ, ಬಿಡಿಎ, ಬಿಡಬ್ಲ್ಯುಎಸ್ಎಸ್ಬಿ ಹಾಗೂ ಸಿಪಿಸಿಬಿ ಸೇರಿದಂತೆ ನಾನಾ ಇಲಾಖೆಗಳಿಗೆ ಸುಮೋಟೋ ಶೋಕಾಸ್ ನೋಟಿಸ್ ನೀಡಿದ್ದ ನ್ಯಾಯಾಧಿಕರಣ, ಪರಿಸರ ಸಂರಕ್ಷಣೆ ಕಾಯಿದೆಯಡಿ ಏಕೆ ಶಿಕ್ಷೆ ವಿಧಿಸಬಾರದು ಎಂದು ಪ್ರಶ್ನಿಸಿತ್ತು. ವಿವರಣೆ ಸಲ್ಲಿಸದೆ ಇದ್ದ ಸಂಸ್ಥೆಗಳಿಗೆ ಎರಡು ವಾರಗಳ ಕಾಲಾವಕಾಶ ನೀಡಿತು.

ಮೇ 4, 2016ರ ತೀರ್ಪಿನಲ್ಲಿ ಕೆರೆಗೆ ಸೇರಿದ್ದ ಸರ್ವೆ ಸಂಖ್ಯೆ 43 ರ 3 ಎಕರೆ 10 ಗಂಟೆ ಜಾಗವನ್ನು ವಾಪಸ್ ಪಡೆದುಕೊಂಡು, ಅದನ್ನು ಮಂತ್ರಿ ಟೆಕ್ಝೋನ್ ಪ್ರೈವೇಟ್ ಲಿಮಿಟಿಡ್ ಸ್ವಂತ ಖರ್ಚಿನಲ್ಲಿ ಮೂಲ ಸ್ವರೂಪಕ್ಕೆ ತಂದು ಕೊಡಬೇಕು ಎಂದು ಆದೇಶಿಸಿತು. ಈ ಜಾಗವನ್ನು ಸಂಬಂಧಿಸಿದವರು ತಕ್ಷಣವೇ ಮೂಲ ಸ್ವರೂಪಕ್ಕೆ ತಂದು, ಸಂಬಂಧಿಸಿದವರ ವಶಕ್ಕೆ ನೀಡಬೇಕೆಂದು ಹೇಳಿತು. ಅಷ್ಟಲ್ಲದೆ, ಕೆರೆ ಹಾಗೂ ಪ್ರಾಜೆಕ್ಟ್ ಪ್ರದೇಶದ ಮಧ್ಯೆ 75 ಮೀಟರ್ ಕಾಪು ಪ್ರದೇಶವನ್ನು ಬಿಡಬೇಕು ಹಾಗೂ ಇದನ್ನು ಹಸಿರು ಪ್ರದೇಶದಂತೆ ಕಾಯ್ದುಕೊಳ್ಳಬೇಕು ಎಂದು ಸೂಚಿಸಿತು:

•   ಬೆಂಗಳೂರಿನ ಎಲ್ಲ ಜಲಾಶ್ರಯಗಳು/ಕೆರೆಗಳ ಕಾಪು ಪ್ರದೇಶದಲ್ಲಿರುವ ಹೊರ ಗೋಡೆ ಸೇರಿದಂತೆ ಎಲ್ಲ ನಿರ್ಮಾಣಗಳನ್ನು ಕೆರೆ ಅಭಿವೃದ್ಧಿ ಪ್ರಾಧಿಕಾರ ನೆಲಕ್ಕುರುಳಿಸಬೇಕು

•   ಸರ್ಕಾರಿ ಇಲ್ಲವೇ ಖಾಸಗಿಯಿರಲಿ, ತ್ಯಾಜ್ಯ ಪರಿಷ್ಕರಣೆ ಘಟಕಗಳು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)/ಪರಿಸರ ಹಾಗೂ ಅರಣ್ಯ ಮಂತ್ರಾಲಯದ ಪರಿಷ್ಕøತ ಮಾನದಂಡಗಳಿಗೆ ಅನುಗುಣವಾಗಿ ಇರಬೇಕು.

•   ನಿರ್ಮಾಣ ಹಾಗೂ ಕಾರ್ಯನಿರ್ವಹಣೆ ಹಂತದಲ್ಲಿ ಬೇಕಾದ ನೀರಿನ ಅಗತ್ಯಗಳನ್ನು ಬಿಡಬ್ಲ್ಯುಎಸ್ಎಸ್ಬಿ ಪ್ರತ್ಯೇಕವಾಗಿ ಪರಿಗಣಿಸಬೇಕು.

•  ನಿರ್ಮಾಣ ಕಾಮಗಾರಿಗೆ ಶುದ್ಧೀಕರಿಸಿದ ತ್ಯಾಜ್ಯ ನೀರು ಮಾತ್ರ ಬಳಸಬೇಕು ಹಾಗೂ ಈ ಶರತ್ತನ್ನು ಪರಿಸರ ಅನುಮತಿ(ಇಸಿ)ಯಲ್ಲಿ ಸೇರ್ಪಡೆಗೊಳಿಸಬೇಕು.

•   ಕರ್ನಾಟಕ ಸರ್ಕಾರ ನಾಲ್ಕು ವಾರಗಳೊಳಗೆ ಜೌಗು ಪ್ರದೇಶಗಳನ್ನು ಗುರುತಿಸಿ ಎಂಓಇಎಫ್ಗೆ ಪ್ರಸ್ತಾವನೆ ಸಲ್ಲಿಸಬೇಕು ಹಾಗೂ ಸಲ್ಲಿಕೆಯಾದ ನಾಲ್ಕು ವಾರದೊಳಗೆ ಎಂಓಇಎಫ್ ಪ್ರಸ್ತಾವವನ್ನು ಪರಿಗಣಿಸಬೇಕು.

•   ರಾಜಕಾಲುವೆ ಇಲ್ಲವೇ ಅದರ ದಡದಲ್ಲಿ ಹಾಗೂ ಜೌಗು ಪ್ರದೇಶದ ಕಾಪು ಪ್ರದೇಶದಲ್ಲಿ ತಂದು ಸುರಿದ ನಿರ್ಮಾಣ ಸಾಮಗ್ರಿಗಳು ಅಥವಾ ತ್ಯಾಜ್ಯವನ್ನು ಯೋಜನೆಯ ಪ್ರವರ್ತಕರು ತೆಗೆದು ಹಾಕಬೇಕು.

Post a comment