nbf@namma-bengaluru.org
9591143888

Authored Articles

ಮನೆ ಮಾಲೀಕರಿಗೆ ಸಂಕಟ: ಅಧಿಕಾರಿಗಳು-ಬಿಲ್ಡರ್‍ಗಳಿಗೆ ಯಾವುದೇ ಶಿಕ್ಷೆಯಿಲ್ಲ

ಬಿಬಿಎಂಪಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುತ್ತಿರುವ ಹೊತ್ತಿನಲ್ಲೇ ಇನ್ನೊಂದು ಮುಖ್ಯ ಕೆಲಸವನ್ನು ಮರೆಯಿತು: ಇಂಥ ಕಟ್ಟಡಗಳು ತಲೆಯೆತ್ತಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು! ಅಕ್ರಮ ಕಟ್ಟಡಗಳನ್ನು ಗುರುತಿಸಿದ ಬಿಬಿಎಂಪಿಗೆ ಅವುಗಳ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿರಲಿಲ್ಲ. ಸರ್ಕಾರದ ಏಜೆನ್ಸಿಗಳು ಕಟ್ಟಡದ ಯೋಜನೆ ಅಂಗೀಕಾರ, ಆರಂಭದ ಪ್ರಮಾಣಪತ್ರ, ಅಂತ್ಯಗೊಂಡ ಬಳಿಕ ನೀಡುವ ಪ್ರಮಾಣಪತ್ರ ಮತ್ತು ಖಾತೆಯನ್ನು ಕಟ್ಟಡ ನಿರ್ಮಾಣದ ನಾನಾ ಹಂತದಲ್ಲಿ ನೀಡಿರುತ್ತವೆ. ಇಷ್ಟೆಲ್ಲ ಅನುಮತಿ ನೀಡಿಕೆಗಳ ನಡುವೆಯೂ ಅಕ್ರಮ ಕಟ್ಟಡಗಳು ಕೆರೆ, ರಾಜಕಾಲುವೆ, ಇನ್ನಿತರ ಚರಂಡಿಗಳು ಮತ್ತು ಬಫರ್ ವಲಯದಲ್ಲಿ ತಲೆಯೆತ್ತಿದರೆ, ನಮ್ಮ ನಗರವನ್ನು ಆಳುತ್ತಿರುವ ಏಜೆನ್ಸಿಗಳ ಸಾಮಥ್ರ್ಯ ಅರಿವಾಗುತ್ತದೆ. ಕೆಲವು ಭಾರಿ ಅಕ್ರಮ ಕಟ್ಟಡಗಳು ತೆರವುಗೊಳ್ಳದೆ ಇರುವುದನ್ನು ನೋಡಿದರೆ, ಜನರಿಗೆ ನೋವುಂಟಾಗುತ್ತದೆ. ಒತ್ತುರಿಯನ್ನು ತಮ್ಮ ಬದುಕಾಗಿಸಿಕೊಂಡ ದೊಡ್ಡ ಬಿಲ್ಡರ್‍ಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಇಂಥ ಉಲ್ಲಂಘನೆಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಹಾಗೂ ಕೆರೆ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವವರು ನಾನಾ ಪ್ರಾಧಿಕಾರಗಳಿಗೆ ಹಲವು ಪತ್ರಗಳನ್ನು ಬರೆದು, ಗಮನ ಸೆಳೆದಿದ್ದಾರೆ. ಆದರೆ, ಈ ಪ್ರಯತ್ನಗಳು ಫಲ ಕೊಟ್ಟಿಲ್ಲ. ಈ ಅಕ್ರಮ ಸಂಬಂಧದ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ, ತೆರವುಗೊಳಿಸುವಿಕೆಯಿಂದ ಅರ್ಧ ನ್ಯಾಯ ಮಾತ್ರ ಸಿಗುತ್ತದಷ್ಟೇ.

ನಗರದ ಎಲ್ಲ ಏಜೆನ್ಸಿಗಳೂ ಬಿಬಿಎಂಪಿ ಜತೆಗೆ ಕೈ ಜೋಡಿಸಿ, ಭವಿಷ್ಯದಲ್ಲಿ ಅತಿಕ್ರಮಣಕ್ಕೆ ಅನುಮತಿ ದೊರೆಯದಂತೆ ನೋಡಿಕೊಳ್ಳುವುದು ಮುಖ್ಯವಾಗಲಿದೆ. ಈ ವೆಬ್‍ಸೈಟ್‍ಗಳಲ್ಲಿ ಇರಬೇಕಾದ ಮುಖ್ಯ ಲಕ್ಷಣವೆಂದರೆ, ಅವು ನಾಗರಿಕ ಸ್ನೇಹಿಯಾಗಿದ್ದು, ವೈಯಕ್ತಿಕ ನಿವೇಶನಗಳ ಪರಿಶೀಲನೆಯ ಸಾಮಥ್ರ್ಯ ಹೊಂದಿರಬೇಕು. ಇದಕ್ಕೆ ಬೇಕಿರುವುದು ಕೆರೆಗಳು, ಚರಂಡಿಗಳು-ಬಫರ್ ವಲಯದೊಡನೆ ಪ್ರಾಥಮಿಕ, ಮಾಧ್ಯಮಿಕ ಹಾಗೂ ತೃತೀಯ ಹಂತದ ಜಲ ಮೂಲಗಳ ನಕ್ಷೆ ಎಲ್ಲ ಕಚೇರಿಗಳಲ್ಲಿ ಹಾಗೂ ವೆಬ್‍ಸೈಟ್‍ನಲ್ಲಿ ಲಭ್ಯವಿರಬೇಕು. ಕರ್ನಾಟಕ ಭೂಕಂದಾಯ ಇಲಾಖೆಯ ಜಾಲತಾಣದಲ್ಲಿ ಲಭ್ಯವಿರುವ ಗುರುತು ಮಾಡಿರುವ ಭಾಷಾ ಕಡತಗಳಲ್ಲಿ ಕೂಡ ಚರಂಡಿಗಳು ಹಾಗೂ ಕೆರೆಗಳನ್ನು ಸ್ಪಷ್ಟವಾಗಿ ವರ್ಗೀಕರಿಸಿಲ್ಲ. ಇದರಿಂದ ಜನರು ತಮ್ಮದೇ ಆದ ತೀರ್ಮಾನಕ್ಕೆ ಬರಬೇಕಾದ ಸ್ಥಿತಿಯಿದೆ. ಕೆಲವೊಮ್ಮೆ ನಾಗರಿಕರು ತಾವು ಖರೀದಿಸಲು ಇಚ್ಛಿಸಿರುವ ಆಸ್ತಿಗಳು ಕಾನೂನಿಗೆ ಅನುಗುಣವಾಗಿವೆಯೇ ಇಲ್ಲವೇ ಎನ್ನುವುದನ್ನು ಕಂಡುಕೊಳ್ಳಲು ಕಂಬದಿಂದ ಕಂಬವನ್ನು ಸುತ್ತಬೇಕಾಗುತ್ತದೆ. ವಾರ್ಡ್ ಸಮಿತಿಗಳ ರಚನೆಗೆ ಸಂಬಂಧಿಸಿದಂತೆ ಹಲವು ವರ್ಷಗಳ ಹೋರಾಟದ ಬಳಿಕವೂ ಸರ್ಕಾರ ಅವುಗಳ ರಚನೆಗೆ ವಿಳಂಬ ನೀತಿ ಅನುಸರಿಸುತ್ತಿದೆ. ನಗರದ ಸ್ಥಳೀಯಾಡಳಿತದಲ್ಲಿ ಪಾರದರ್ಶಕತೆಯನ್ನು ಅಳವಡಿಸುವಲ್ಲಿ ಸರ್ಕಾರ ಬದ್ಧತೆ ಹೊಂದಿಲ್ಲ ಎನ್ನುವುದು ಸ್ಪಷ್ಟವಾಗಲಿದೆ.

Post a comment