“ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ” ವನ್ನು ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ -2014 ರ ಅಡಿಯಲ್ಲಿ ಕೆರೆ, ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಚಿಸಲಾಗಿದೆ. ಇದು ಬೆಂಗಳೂರು ಅಭಿವೃದ್ಧಿ ಪ್ರದೇಶ ಮತ್ತು ಎಲ್ಲಾ ನಗರ ಮುನ್ಸಿಪಲ್ ನಿಗಮಗಳ ವ್ಯಾಪ್ತಿಗೆ ಬರುವುದಿಲ್ಲ. Read more...
NBF ಆಹಾರ ವಿತರಣೆ ನೆರವು
ಕರೋನಾ ಲಾಕ್‍ಡೌನ್‍ನಿಂದ ಬೆಂಗಳೂರಿನಲ್ಲಿರುವ ವಸತಿರಹಿತರು, ಅಸಂಘಟಿತ ವಲಯದ ದಿನಗೂಲಿ ನೌಕರರು, ಮನೆ ಕೆಲಸದವರು, ಚಿಂದಿ ಆಯುವವರು, ರಿಕ್ಷಾ ಚಾಲಕರು, ಗಾಡಿಯಲ್ಲಿ ಮಾರಾಟ ಮಾಡುವ ವ್ಯಾಪಾರಿಗಳು, ಒಂಟಿ ತಾಯಂದಿರು, ನಿರ್ಮಾಣ ಕೆಲಸಗಾರರು ಹಾಗೂ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿನಿತ್ಯದ ಊಟಕ್ಕಾಗಿ ಪರದಾಡುತ್ತಿದ್ದಾರೆ. 28 ಮಾರ್ಚ್ 2020ರಂದು ಆರಂಭವಾದ ಎನ್‍ಬಿಎಫ್‍ನ ಫುಡ್ ಡೆಲಿವರಿ ಡ್ರೈವ್, ಇಂಥ ದುರ್ಬಲರು ಹಾಗೂ ಅಂಚಿನಲ್ಲಿರುವವರನ್ನು ತಲುಪಿದೆ, ತಲುಪುತ್ತಿದೆ. ಈ ಉಪಕ್ರಮವು ಅಗತ್ಯವಿರುವವರಿಗೆ ಆಹಾರದ ಪೊಟ್ಟಣ ಹಾಗೂ ಕುಟುಂಬಗಳಿಗೆ…...
ಬನ್ನೇರುಘಟ್ಟ ಇ.ಎಸ್.ಝೆಡ್ ಅಧಿಸೂಚನೆ ವಿರುದ್ಧ ನಮ್ಮ ಬೆಂಗಳೂರು ಫೌಂಡೇಶನ್ ಪ್ರತಿಭಟನೆ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಬೆಂಗಳೂರಿನ ಜನಜೀವನದಲ್ಲಿ ಹಲವಾರು ಕಾರಣಗಳಿಂದ ಮಹತ್ವದ ಪಾತ್ರವಹಿಸಿದೆ. ಇದು ಕೇವಲ ವನ್ಯಪ್ರಾಣಿಗಳಿಗೆ ಮಾತ್ರ ಆಶ್ರಯತಾಣವಾಗಿ ಇರುವುದಲ್ಲದೆ, ಬೆಂಗಳೂರು ನಗರಕ್ಕೆ ಅತೀ ಸಾಮಿಪ್ಯದಲ್ಲಿರುವ ಹಚ್ಚಹಸಿರಿನ ಪ್ರದೇಶಗಳಲ್ಲಿ ಪ್ರಮುಖವಾದುದಾಗಿದೆ. ಇದು ಇಲ್ಲಿನ ಜೀವ ವೈವಿದ್ಯತೆಯ ಸಮತೋಲನದೊಂದಿಗೆ, ಭೂ ತಾಪಮಾನವನ್ನು ಸರಿದೂಗಿಸಿ ಪರಿಸರಕ್ಕೆ ಉತ್ತಮ ಆಮ್ಲಜನಕವನ್ನು ಹೊರಸೂಸಿ ಬೆಂಗಳೂರಿನ ಜನಜೀವನಲ್ಲಿ ಆರೋಗ್ಯದ ಗುಣಮಟ್ಟವನ್ನು ಬಲಪಡಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ, ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ…...
ಮಕ್ಕಳ ಕೆರೆ ಹಬ್ಬ
ಮಕ್ಕಳನ್ನು ತಮ್ಮ ಬಡಾವಣೆಗಳ ಸರಹದ್ದಿನಲ್ಲಿರುವ ಕೆರೆಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ, ಕೆರೆಗಳ ಶುಚಿತ್ವ ಕಾಪಾಡಿಕೊಂಡು ಅದನ್ನು ಸದಾ ಜೀವಜಲಮೂಲವಾಗಿ ಉಳಿಸಿಕೊಳ್ಳುವಲ್ಲಿ ತಾವೂ ಪಾಲುದಾರರಾಗಲು ಪ್ರೇರೇಪಿಸುವುದೇ ಈ ಮಕ್ಕಳ ಕೆರೆ ಹಬ್ಬ ಆಚರಣೆಯ ಮೂಲ ದ್ಯೇಯೋದ್ದೇಶವಾಗಿದೆ. “ನಮ್ಮ ಬೆಂಗಳೂರು ಫೌಂಡೇಶನ್ ಈ ಮಕ್ಕಳ ಕೆರೆ ಹಬ್ಬವನ್ನು ಫೆಬ್ರವರಿ 2020 ರಿಂದ ಒಂದು ವರ್ಷಗಳ ಕಾಲ ಆಚರಿಸಲು ಉದ್ದೇಶಿಸಿದ್ದು, ಇದರಲ್ಲಿ ಹತ್ತು ಕೆರೆಗಳನ್ನು ಸಂಪೂರ್ಣ ಶುಚಿಗೊಳಿಸಿ ಅದರ ಜವಾಬ್ದಾರಿಯನ್ನು ಮಕ್ಕಳೇ ಹೊರುವಂತಹಾ ವಾತಾವರಣ ನಿರ್ಮಾಣ…...