ಜನವರಿ 23, 2018ರಂದು ನಮ್ಮ ಬೆಂಗಳೂರು ಪ್ರತಿಷ್ಠಾನವು ಪುನರ್‍ವಿಮರ್ಶಿತ ಮಾಸ್ಟರ್ ಯೋಜನೆಯ ಕರಡಿಗೆ ತನ್ನ ಆಕ್ಷೇಪಗಳನ್ನು ಸಲ್ಲಿಸಿತು. ಇದು ಪ್ರತಿಷ್ಠಾನವು ನಗರ ಯೋಜಕರು, ಪರಿಣತರು, ನಿವಾಸಿಗಳ ಕಲ್ಯಾಣ ಸಂಘಟನೆಗಳು ಹಾಗೂ ಆಸಕ್ತರೊಡನೆ ನಡೆಸಿದ ಸಂವಾದ, ಚರ್ಚೆಗಳ ಸರಣಿಯ ಮುಂದುವರಿದ ಭಾಗವಾಗಿತ್ತು. ಸರೋವರಗಳ ಮೂಲಕ ಹಾದುಹೋಗುವ ರಸ್ತೆಗಳು, ಸರೋವರಗಳನ್ನು ತಪ್ಪಾಗಿ ಹೆಸರಿಸಿರುವುದು, ರಸ್ತೆಗಳ ಅಳತೆ ತಪ್ಪಾಗಿ ನಮೂದಿಸಿರುವುದು, ಸಾರ್ವಜನಿಕ ಸ್ಥಳಗಳು ಮತ್ತು ಜಲಾಶಯಗಳು ನಾಪತ್ತೆಯಾಗಿರುವುದು ಹಾಗೂ ಚರಂಡಿ ವ್ಯವಸ್ಥೆಗಳನ್ನು ಅಸ್ಪಷ್ಟವಾಗಿ ಗುರುತಿಸಿರುವುದು…...
ಉಕ್ಕಿನ ಸೇತುವೆ:#ಸ್ಟೀಲ್‍ಫ್ಲೈಓವರ್‍ಬೇಡ
ಮಾರ್ಚ್ 2014ರಲ್ಲಿ ಕರ್ನಾಟಕ ಸರ್ಕಾರ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ 6.72 ಕಿಮೀ ಉದ್ದದ ಉಕ್ಕಿನ ಫ್ಲೈಓವರ್ ನಿರ್ಮಿಸುವುದಾಗಿ ಘೋಷಿಸಿದಾಗ, ಈ ತಾತ್ಕಾಲಿಕ ಯೋಜನೆಯು ಹಿಂದೆಂದೂ ಇಲ್ಲದಂತೆ ಜನರನ್ನು ಸಂಘಟಿಸುತ್ತದೆ ಎನ್ನುವುದು ಸರ್ಕಾರಕ್ಕೆ ಗೊತ್ತಿರಲಿಲ್ಲ. ಸಕಾರದ ದಾರಿ ತಪ್ಪಿಸುವ, ಹಠಮಾರಿತನದ, ಅವಕಾಶವಾದಿ ಹಾಗೂ ನಿರ್ಲಕ್ಷ್ಯ ಮನೋಭಾವವನ್ನು ಸಹಿಸಲಾಗದ 8000ಕ್ಕೂ ಅಧಿಕ ಬೆಂಗಳೂರಿಗರು ಭಾನುವಾರ ಬೆಳಗ್ಗೆ ಮಾನವ ಸರಪಳಿಯನ್ನು ನಿಮಿಸುವ ಮೂಲಕ ಸರಳ ಆದರೆ ಪ್ರಬಲ ಸಂದೇಶವನ್ನು ರವಾನಿಸಿದರು: ಅದೇ #Sಣeeಟಈಟಥಿoveಡಿಃeಜಚಿ. ಒಂದು…...
ಹೊಸ ವಲಯೀಕರಣ ಬೇಡ ಎನ್ನುವ ಕೂಗು
ನಮ್ಮ ಬೆಂಗಳೂರು ಪ್ರತಿಷ್ಠಾನವು ಸಿಟಿಜನ್ ಆಕ್ಷನ್ ಫೋರಂ ಹಾಗೂ ನರಗದ ನಾನಾ ಭಾಗಗಳ ಹಲವು ನಿವಾಸಿಗಳ ಕಲ್ಯಾಣ ಸಂಘಟನೆ(ಆರ್‍ಡಬ್ಲ್ಯುಎ)ಗಳೊಡನೆ ಕೈಜೋಡಿಸಿ, ನಗರಾಭಿವೃದ್ಧಿ ಇಲಾಖೆಯ ಇತ್ತೀಚಿನ ಹೊಸ ವಲಯ ನಿಯಮಗಳ ಕರಡಿಗೆ “ಹೊಸ ಝೋನಿಂಗ್ ಬೇಡ’ ಎನ್ನುವ ಮೂಲಕ ಕರ್ನಾಟಕ ಸರ್ಕಾರಕ್ಕೆ ಪ್ರಬಲ ಸಂದೇಶವನ್ನು ರವಾನಿಸಿದೆ. ಕರಡು ಅಧಿಸೂಚನೆ ಪ್ರಕಾರ, 9 ಮೀಟರ್(29.5 ಅಡಿ) ಅಗಲವಿರುವ ರಸ್ತೆಯಿರುವ ವಸತಿ ಪ್ರದೇಶಗಳಲ್ಲಿ ತರಕಾರಿ ಮತ್ತು ಹೂವಿನ ಮಳಿಗೆಗಳು, ಫಾಸ್ಟ್ ಫುಡ್ ಹಾಗೂ ಕೊಂಡೊಯ್ಯುವ…...
ಬೆಂಗಳೂರಿನ ನಿಜವಾದ ಹೀರೋಗಳಿಗೆ ಗೌರವ
ಬೆಂಗಳೂರನ್ನು ಇನ್ನಷ್ಟು ಉತ್ತಮಗೊಳಿಸಲು ನೆರವಾಗುವ ವಿಶಿಷ್ಟ ವ್ಯಕ್ತಿಗಳನ್ನು ಗುರುತಿಸಲು ಹಾಗೂ ಗೌರವಿಸಲು ಪ್ರತಿ ವರ್ಷ ನೀಡಲಾಗುವ ನಮ್ಮ ಬೆಂಗಳೂರು ಪ್ರಶಸ್ತಿಗೆ ಆಯ್ಕೆಯಾದವರಿಗೆ ತಲಾ 2 ಲಕ್ಷ ರೂ. ನೀಡಲಾಗುತ್ತದೆ. ಈ ವರ್ಷ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ನಮ್ಮ ಬೆಂಗಳೂರು ಫೌಂಡೇಷನ್ ಆರೂ ಮಂದಿ ವಿಜೇತರಿಗೆ ಹೆಚ್ಚುವರಿ 2 ಲಕ್ಷ ರೂ.ಗಳನ್ನು ಸಂಗ್ರಹಿಸಿ ವಿತರಿಸಲು ನಿರ್ಧರಿಸಿದೆ. ಈ ವರ್ಷದ ವಿಶಿಷ್ಟ ಪ್ರಶಸ್ತಿ ವಿಜೇತರು ಹಾಗೂ ನೀವು ಅವರಿಗೆ ಹೇಗೆ ನೆರವಾಗಬಹುದು…...