nbf@namma-bengaluru.org
9591143888

ಅಭಿಯಾನಗಳು

ಉಕ್ಕಿನ ಸೇತುವೆ:#ಸ್ಟೀಲ್‍ಫ್ಲೈಓವರ್‍ಬೇಡ

ಮಾರ್ಚ್ 2014ರಲ್ಲಿ ಕರ್ನಾಟಕ ಸರ್ಕಾರ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ 6.72 ಕಿಮೀ ಉದ್ದದ ಉಕ್ಕಿನ ಫ್ಲೈಓವರ್ ನಿರ್ಮಿಸುವುದಾಗಿ ಘೋಷಿಸಿದಾಗ, ಈ ತಾತ್ಕಾಲಿಕ ಯೋಜನೆಯು ಹಿಂದೆಂದೂ ಇಲ್ಲದಂತೆ ಜನರನ್ನು ಸಂಘಟಿಸುತ್ತದೆ ಎನ್ನುವುದು ಸರ್ಕಾರಕ್ಕೆ ಗೊತ್ತಿರಲಿಲ್ಲ. ಸಕಾರದ ದಾರಿ ತಪ್ಪಿಸುವ, ಹಠಮಾರಿತನದ, ಅವಕಾಶವಾದಿ ಹಾಗೂ ನಿರ್ಲಕ್ಷ್ಯ ಮನೋಭಾವವನ್ನು ಸಹಿಸಲಾಗದ 8000ಕ್ಕೂ ಅಧಿಕ ಬೆಂಗಳೂರಿಗರು ಭಾನುವಾರ ಬೆಳಗ್ಗೆ ಮಾನವ ಸರಪಳಿಯನ್ನು ನಿಮಿಸುವ ಮೂಲಕ ಸರಳ ಆದರೆ ಪ್ರಬಲ ಸಂದೇಶವನ್ನು ರವಾನಿಸಿದರು: ಅದೇ #Sಣeeಟಈಟಥಿoveಡಿಃeಜಚಿ. 

ಒಂದು ವರ್ಷದ ಬಳಿಕ ಅಕ್ಟೋಬರ್ 16, 2016ರಂದು ಬೆಂಗಳೂರಿಗರ ಮನಸ್ಸಿನಲ್ಲಿ ಸಾಮೂಹಿಕ ನಾಗರಿಕತ್ವದ ಬಲವನ್ನು ಪರಿಣಾಮಕಾರಿಯಾಗಿ ಮತ್ತೊಮ್ಮೆ ಹೊತ್ತಿಸಿದ ದಿನವನ್ನು ಮರುಬಿಂಬಿಸಿದ ನಮ್ಮ ಬೆಂಗಳೂರು ಪ್ರತಿಷ್ಠಾನವು ಆಚರಿಸುತ್ತಿದೆ. #IಆಚಿಡಿeಜಖಿoSಚಿಥಿಃeಜಚಿ  ಆಂದೋಲನವು ಉಕ್ಕಿನ ಸೇತುವೆ ಬೇಡ ಎಂದು ಮಾನವ ಸರಪಳಿಯಲ್ಲಿ ಪಾಲ್ಗೊಂಡಿದ್ದ ಎಲ್ಲ ನಾಗರಿಕರಿಗೂ ಧನ್ಯವಾದ ಹೇಳಲು ನಡೆಸಿದ ಉಪಕ್ರಮ.

(ಓದಿ:Sಣeeಟ ಈಟಥಿoveಡಿ ಃeಜಚಿ ಛಿiಣizeಟಿ movemeಟಿಣ)

(ಓದಿ: PIಐ ಚಿgಚಿiಟಿsಣ Sಣeeಟ ಈಟಥಿoveಡಿ iಟಿ ಏಚಿಡಿಟಿಚಿಣಚಿಞಚಿ ಊಅ)

ಈ ನಾಗರಿಕ ಆಂದೋಲನವು 2244 ಮರಗಳನ್ನು ಉಳಿಸಿತಲ್ಲದೆ, ಸರ್ಕಾರವು

1. ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳಲ್ಲಿ ನಾಗರಿಕರ ಪಾಲುದಾರಿಕೆಗೆ ಸ್ಥಳಾವಕಾಶ ಮಾಡಿಕೊಡಬೇಕು

2. ಸುಸ್ಥಿರತೆ ಸೇರಿದಂತೆ ನಗರದ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಒಳಗೊಳ್ಳುವ ಶಾಸನಬದ್ಧ ಬಹು ಹಂತಗಳ ಅಭಿವೃದ್ಧಿ ಯೋಜನೆಯನ್ನು ಹೊಂದಿರಬೇಕು

3. ಸಾರ್ವಜನಿಕರ ಹಣ, ಆಸ್ತಿಗಳು ಹಾಗೂ ಒಪ್ಪಂದಗಳಿಗೆ ಉತ್ತರದಾಯಿ ಆಗಿರಬೇಕು-

ಎಂದು ಎಚ್ಚರಿಸಿತು.

“ಬೇಡ’ ಎಂದು ಹೇಳುವ ಮೂಲಕ ಎಷ್ಟು ಕಾಲ ಮೌನವಾಗಿರುತ್ತೀರೋ ಅಷ್ಟು ಕಾಲ ಶೋಷಣೆಗೊಳಗಾಗುತ್ತೀರಿ ಎಂಬ ಬಗ್ಗೆ ಸಹವಾಸಿ ಬೆಂಗಳೂರಿಗರಿಗೆ ಅರಿವು ಮೂಡಿಸಿದ ಎಲ್ಲರಿಗೂ ನಾವು ಮತ್ತೊಮ್ಮೆ ಧನ್ಯವಾದ ಹೇಳಲು ಇಚ್ಛಿಸುತ್ತೇವೆ. ಒಂದು ವರ್ಷದ ಹಿಂದೆ ನಾಗರಿಕರಲ್ಲಿ ಮಾರ್ದನಿಗೊಂಡ #IಆಚಿಡಿeಜಖಿoSಚಿಥಿಃeಜಚಿ ಎಂಬ ಕೂಗು ಬೆಂಗಳೂರನ್ನು ರಕ್ಷಿಸಲು ಹಾಗೂ ಮರುಸ್ಥಾಪಿಸಲು ಇನ್ನಷ್ಟು ಹೆಚ್ಚಬೇಕಿದೆ.

Post a comment