nbf@namma-bengaluru.org
9591143888

PILs

ಉಕ್ಕಿನ ಮೇಲ್ಸೇತುವೆ ಬೇಡ

ಬೆಂಗಳೂರಿಗರಲ್ಲಿ ಹೆಚ್ಚಿನವರು ಬೇಸರಗೊಂಡಿದ್ದಾರೆ. ಸರ್ಕಾರ ಇನ್ನೊಂದು ಮೂಲಸೌಕರ್ಯ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಂಡಿರುವುದು ಇದಕ್ಕೆ ಕಾರಣವಲ್ಲ: ಬದಲಿಗೆ, ಜನರಿಗೆ ಅಗತ್ಯವಿಲ್ಲದ ಹಾಗೂ ಯೋಜಿತವಲ್ಲದ ಇನ್ನೊಂದು ಯೋಜನೆಗೆ ಅನುಮತಿ ಕೊಟ್ಟಿರುವುದು ಇದಕ್ಕೆ ಕಾರಣ. ಉದ್ದೇಶಿತ ಉಕ್ಕಿನ ಸೇತುವೆ ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ನಿರ್ಮಾಣಗೊಳ್ಳಲಿದ್ದು, ಯೋಜನೆಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಗರದ ಒಟ್ಟಾರೆ ಅಭಿವೃದ್ಧಿ ಬಗ್ಗೆ ನಮ್ಮ ಸ್ವರ ಕೇಳಬೇಕೆಂದು ಜನ ಬೇಡಿಕೆ ಮುಂದೊತ್ತಿದ್ದಾರೆ. ಆದರೆ, ಇಲ್ಲಿ ಏಳುವ ಪ್ರಶ್ನೆಯೆಂದರೆ, ನಗರದಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಹಾಗೂ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡುವ ಇಂಥ ತಾತ್ಕಾಲಿಕ ಯೋಜನೆಗಳು ನಮಗೆ ಬೇಕೇ?

ಇದನ್ನೆಲ್ಲ ಪರಿಗಣಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನವು ಅಕ್ಟೋಬರ್ 6, 2016ರಂದು ಕರ್ನಾಟಕ ಹೈಕೋರ್ಟ್ನಲ್ಲಿ ಬಿಡಿಎ(ಪ್ರತಿವಾದಿ) ಉದ್ದೇಶಿಸಿದ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆವರೆಗೆ(ಉಕ್ಕಿನಿಂದ ನಿರ್ಮಾಣ), ಲೆ ಮೆರಿಡಿಯನ್ ಹಾಗೂ ಮೇಖ್ರಿ ವೃತ್ತದ ಮೂಲಕ ಸಾಗುವ 1,800 ಕೋಟಿ ರೂ ವೆಚ್ಚದ ಆರು ಮಾರ್ಗಗಳ ಉಕ್ಕಿನ ಸೇತುವೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿತು.

ಪಿಐಎಲ್ ಏಕೆ?

  1. ಯೋಜನೆಗೆ ಸಂಬಂಧಿಸಿದ ಪ್ರಮುಖ ಅಂಶಗಳಾದ ವಿಸ್ತøತ ಯೋಜನಾ ವರದಿ, ಕಾರ್ಯಸಾಧ್ಯತೆ ವರದಿ ಹಾಗೂ ಯೋಜನೆಗೆ ಹಣಕಾಸು ಪೂರೈಕೆ ಇತ್ಯಾದಿ ಮಾಹಿತಿಗಳನ್ನು ಸಾರ್ವಜನಿಕ ಕ್ಷೇತ್ರದಲ್ಲಿ ಪರಿಶೀಲನೆಗೆ ಅಳವಡಿಸಿಲ್ಲ.
  2. ಯೋಜನೆ ಕುರಿತು ಸಾರ್ವಜನಿಕರ ಜೊತೆ ಸಂವಾದ ನಡೆಸಿಲ್ಲ ಹಾಗೂ ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ಹಲವು ನಗರ ಯೋಜನೆ ಪರಿಣತರು ಸಂಶಯ ವ್ಯಕ್ತಪಡಿಸಿದ್ದಾರೆ.
  3. ರಾಜ್ಯದ ಸ್ವಾಭಾವಿಕ ಸಂಪನ್ಮೂಲ ರಕ್ಷಣೆ ಹಾಗೂ ಸಾರ್ವಜನಿಕ ಹಣದ ಬಗ್ಗೆ ಪ್ರತಿವಾದಿಗಳ ಆಡಳಿತಾತ್ಮಕ ಕ್ರಿಯೆಗಳು ತಾತ್ಕಾಲಿಕ ಹಾಗೂ ಅರೆಬರೆ ಆಗಿದ್ದು, ಸಂಶಯಕ್ಕೆ ಎಡೆಮಾಡಿಕೊಡುವಂತಿದೆ.
  4. ಯೋಜನೆಯು ಸ್ವತಂತ್ರ ಹಾಗೂ ಶಾಸನಾತ್ಮಕ ಸಂಸ್ಥೆಯಾದ ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿ(ಬಿಎಂಪಿಸಿ)ಯ ಪರಿಶೀಲನೆಗೆ ಒಳಪಟ್ಟಿಲ್ಲ: ಬದಲಾಗಿ, ತಾತ್ಕಾಲಿಕವಾಗಿ ಆಯ್ಕೆಯಾದ ನಗರ ಯೋಜಕರ ಗುಂಪಾದ ಬೆಂಗಳೂರು ವಿಷನ್ ಗ್ರೂಪ್ ಎದುರು ಮಂಡಿಸಲಾಗಿದೆ.

ಪ್ರತಿವಾದಿಗಳು

ಕರ್ನಾಟಕ ರಾಜ್ಯ, ಸರ್ಕಾರದ ಪ್ರತಿನಿಧಿಯಾಗಿ ಮುಖ್ಯ ಕಾರ್ಯದರ್ಶಿ

ಸರ್ಕಾರದ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ

ಆಯುಕ್ತರು,ಬಿಡಿಎ

ಬಿಬಿಎಂಪಿ ಪರವಾಗಿ ಆಯುಕ್ತರು

ಬಿಬಿಎಂಪಿಯ ಮುಖ್ಯ ಎಂಜಿನಿಯರ್

ಭಾರತದ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್, ಹೊಸ ದಿಲ್ಲಿ

ಪ್ರಸ್ತುತ ಪರಿಸ್ಥಿತಿ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನವೆಂಬರ್ 3,2016ರಂದು ಉಕ್ಕಿನ ಸೇತುವೆ ಕಾಮಗಾರಿಯನ್ನು ಮುಂದುವರಿಸುವುದಿಲ್ಲ ಎಂದು ಹೈಕೋರ್ಟ್ಗೆ ಮುಚ್ಚಳಿಕೆ ಸಲ್ಲಿಸಿತು. ಯೋಜನೆಯ ಶಾಸನಾತ್ಮಕ ಹಾಗೂ ಕಾನೂನಾತ್ಮಕ ಅಂಶಗಳಾದ, ಸಾರ್ವಜನಿಕ ಸಂವಾದದ ಕೊರತೆ ಹಾಗೂ ಬಿಎಂಪಿಸಿಯಿಂದ ಯೋಜನೆಯ ಪರಿಶೀಲನೆ ನಡೆಸದೆ ಇರುವ ಕುರಿತು ಪರಿಶೀಲಿಸಿ ಅಂತಿಮ ತೀರ್ಪು ನೀಡುವುದಾಗಿ ನ್ಯಾಯಾಲಯ ಹೇಳಿತು.

Post a comment