ಬೆಳ್ಳಂದೂರು ಉಳಿಸಿ ಕ್ರಿಯಾಯೋಜನೆ
ಬೆಳ್ಳಂದೂರು ಕೆರೆಯ ನಾಶ ನಮ್ಮಗಳ ಬೆಂಗಳೂರಿನ ದುರ್ಬಳಕೆಯ ಉತ್ತಮ ಉದಾಹರಣೆ. ಸರ್ಕಾರ, ನಾಗರಿಕರು ಹಾಗೂ ನಾಗರಿಕ ಸಮಾಜ ಒಟ್ಟಾಗಿ ಇಂಥ ವಾಸ್ತವಿಕ ಸವಾಲುಗಳನ್ನು ಎದುರಿಸುವುದರಲ್ಲಿ ಹಾಗೂ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಯೋಜಿತವಲ್ಲದ ಅಭಿವೃದ್ಧಿಯನ್ನು ತಡೆಯಲು ಜನ ಒಟ್ಟಾಗುವುದರಲ್ಲಿ ನಗರದ ಭವಿಷ್ಯ ಇದೆ. ನಮ್ಮ ಬೆಂಗಳೂರು ಪ್ರತಿಷ್ಠಾನದ ಆಶ್ರಯದಲ್ಲಿ ನಾಗರಿಕರು, ತಜ್ಞರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಂಯೋಜಿತ ಹಾಗೂ ಶ್ರಮದಾಯಕ ಸಂಯೋಜಿತ ಪ್ರಯತ್ನವೇ ಬೆಳ್ಳಂದೂರು ರಕ್ಷಿಸಿ ಕ್ರಿಯಾಯೋಜನೆ. ಈ ಪ್ರಯತ್ನದಲ್ಲಿ…...
ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿಯ ಸಮೀಕ್ಷೆ
ಡಿಸೆಂಬರ್ 31, 2013ರಂದು ನಡೆದ ಭೂಮಿ ಒತ್ತುವರಿ ಸಮಿತಿಯ ಸಭೆಯ ನಿರ್ದೇಶನದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ನಡೆಸಿದ ಪರಿಶೀಲನೆ ಭೇಟಿಗಳ ಮೂಲಕ ಕೆಳಗಿನ ದಾಖಲೆಯನ್ನು ಸಿದ್ಧಗೊಳಿಸಲಾಗಿದೆ. ಅಧಿಕಾರಿ ಶ್ರೀ ಕೇಶವಮೂರ್ತಿ ಅವರೊಂದಿಗೆ ಬಿಬಿಎಂಪಿ ಸ್ವಾಧೀನದಲ್ಲಿರುವ 13 ಕೆರೆಗಳನ್ನು ಪರಿಶೀಲಿಸಲಾಯಿತು. ಬಿಬಿಎಂಪಿಯ ಪರಿಸರ ಕೋಶದ ಮುಖ್ಯ ಎಂಜಿನಿಯರ್ ಶ್ರೀ ಬಿ.ವಿ.ಸತೀಶ್ ಅವರ ಮಾರ್ಗದರ್ಶನ ಹಾಗೂ ನೀಡಿದ ಮಾಹಿತಿಯನ್ನು ಆಧರಿಸಿ ಕೆರೆಗಳಿಗೆ ಭೇಟಿ ನೀಡಿದೆವು. Read Full Report Here...
ವಲಯ ನಿಯಮಗಳು: ನಿವಾಸಿಗಳು ವಿ/ಎಸ್ ವಾಣಿಜ್ಯ ಸಂಸ್ಥೆಗಳು
ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳ ಸ್ಥಾಪನೆ ವಿರುದ್ಧ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲೇ, ನಗರದ ಕೆಲ ಪ್ರದೇಶಗಳಲ್ಲಿ ವ್ಯಾಪಾರಿಗಳು ವಿವಾಸಿಗಳನ್ನು ಬೆದರಿಸಿದ ಪ್ರಕರಣಗಳು ನಮ್ಮ ಬೆಂಗಳೂರು ಪ್ರತಿಷ್ಠಾನದ ಗಮನಕ್ಕೆ ಬಂದಿವೆ. ಇದರ ವಿರುದ್ಧ ಜನ ದನಿಯೆತ್ತಿದ್ದು, ಪಾಲಿಕೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ವಲಯ ನಿಯಮಗಳ ಅನುಷ್ಠಾನವನ್ನು ಖಾತ್ರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಪಾಲಿಕೆ ಆಯುಕ್ತರಿಗೆ ಸೆಪ್ಟೆಂಬರ್ 20, 2019ರಲ್ಲಿ ಎನ್‍ಬಿಎಫ್ ಹಾಗೂ 17 ನಿವಾಸಿಗಳ…...
ವಿವಾದಾತ್ಮಕ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಮಸೂದೆ,2016
ಅಕ್ಟೋಬರ್ 4,2016ರಂದು ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದ ಜಾಗಗಳನ್ನುಕಡಿಮೆಗೊಳಿಸುವ ಅಂಶಗಳಿದ್ದ ವಿವಾದಾತ್ಮಕ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಮಸೂದೆ, 2016ನ್ನು ಸರ್ಕಾರಕ್ಕೆ ವಾಪಸ್ ಮಾಡಿದರು. ರಾಜ್ಯಪಾಲರ ಈ ಕ್ರಮದ ಹಿಂದೆ ಇದ್ದುದು ನಗರ ಪ್ರದೇಶಗಳಲ್ಲಿನ ಹಸಿರು ಹಾಗೂ ತೆರೆದ ಪ್ರದೇಶಗಳನ್ನು ಸರ್ಕಾರ ಕೈವಶ ಮಾಡಿಕೊಳ್ಳುವುದರ ವಿರುದ್ಧ ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ನಮ್ಮ ಬೆಂಗಳೂರು ಪ್ರತಿಷ್ಠಾನ ನಡೆಸಿದ ನಿರಂತರ ಪ್ರಯತ್ನ. ಕರ್ನಾಟಕದ 250 ನಗರಗಳು ಹಾಗೂ…...
ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿಯ ಸಬಲೀಕರಣ
ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ನಗರ ಅವೈಜ್ಞಾನಿಕವಾಗಿ ಬೆಳೆದಿದ್ದು, ಈಗ ನಗರಕ್ಕೆ ಬೇಕಿರುವುದು ಸೂಕ್ತವಾದ, ದೀರ್ಘಕಾಲೀನ ಶಾಸನಬದ್ಧ ಯೋಜನೆ. ನಗರದ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿ(ಬಿಎಂಪಿಸಿ) ಎದುರು ಇಡಬೇಕಿದ್ದು, ಸಮಿತಿಯ ಸದಸ್ಯರು ಪಾರದರ್ಶಕವಾಗಿ ನಾನಾ ಯೋಜನೆಗಳನ್ನು ಕುರಿತು ಚರ್ಚಿಸುತ್ತಾರೆ. ಬಿಎಂಪಿಸಿ ಸದಸ್ಯರು ನಗರದ ಸಂರಕ್ಷಣೆಗೆ ಸಂಬಂಧಿಸಿದಂತೆ ಮೂಲಭೂತ ಕರ್ತವ್ಯ ಹಾಗೂ ಹಕ್ಕುಬಾಧ್ಯತೆಯನ್ನು ಹೊಂದಿರುತ್ತಾರೆ ಮತ್ತು ಅವರು ಬೆಂಗಳೂರಿನ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ಪ್ರಕ್ರಿಯೆಗಳನ್ನು…...