nbf@namma-bengaluru.org
9591143888

Blog

ಬೆಂಗಳೂರು ಬಾಗಿದೆ, ಗಾಯಗೊಂಡಿದೆ; ಆದರೆ, ಪರಾಭವಗೊಂಡಿಲ್ಲ

ಸಾವಿರಾರು ಕಠಿಣ ಪರಿಶ್ರಮಿ ನಾಗರಿಕರ ಭವಿಷ್ಯವನ್ನು ಡೋಲಾಯಮಾನಗೊಳಿಸಿದ ಭ್ರಷ್ಟ ಅಧಿಕಾರಿಗಳು ಹಾಗೂ ಕಾನೂನು ಉಲ್ಲಂಘಿಸುವ ಬಿಲ್ಡರ್‍ಗಳ ವಿರುದ್ಧ ಬೆಂಗಳೂರು ತನ್ನ ಆಕ್ರೋಶವನ್ನು ದಾಖಲಿಸಿತು. ವ್ಯಾಪಕ ಭ್ರಷ್ಟಾಚಾರ, ಕಾನೂನಿನ ಉಲ್ಲಂಘನೆ ಹಾಗೂ ದುರಾಡಳಿತವನ್ನು ಬಹುತೇಕ ಭಾರತೀಯರು “ಜೀವನ ವಿಧಾನ’ ಎಂದು ಭಾವಿಸುತ್ತಾರೆ. ಆದರೆ, ಈ ಅಪರಾಧಗಳಿಗೆ “ಕೂಡದು’ ಎಂದರೆ ಎಲ್ಲ ರಾಜ್ಯಗಳು, ನಗರ ಹಾಗೂ ನಾಗರಿಕರಿಗೆ ಲಾಭ ವಾಗುತ್ತದೆ ಎನ್ನುವುದನ್ನು ಪರಿಗಣಿಸುವುದಿಲ್ಲ. ಒಂದು ನಗರ ಮಾತ್ರ ಅನಿಯಂತ್ರಿತ ಭ್ರಷ್ಟಾಚಾರ ಹಾಗೂ ಉತ್ತರದಾಯಿತ್ವದ…...

Read more

ಭ್ರಷ್ಟಾಚಾರದಿಂದ ಧೂಳೀಪಟ

ದೇಶದ ಐಟಿ ಕೇಂದ್ರ ಎನಿಸಿಕೊಂಡಿರುವ ಬೆಂಗಳೂರು, ತಾಂತ್ರಿಕ ಹಾಗೂ ಡಿಜಿಟಲ್ ಕ್ರಾಂತಿಯ ಯುಗಕ್ಕೆ ದೇಶವನ್ನು ಮುನ್ನಡೆಸಿದೆ. ಆದರೆ, ಪ್ರಸ್ತುತ ಅನಿಯಂತ್ರಿತ ನಗರೀಕರಣ, ಲಂಗುಲಗಾಮಿಲ್ಲದ ಬೆಳವಣಿಗೆ ಹಾಗೂ ನಗರವನ್ನು ಆಳುತ್ತಿರುವವರಲ್ಲಿ ಉತ್ತರದಾಯಿತ್ವದ ಕೊರತೆಯಿಂದಾಗಿ, ಬಲಿಪಶುವಾಗಿ ಪರಿಣಮಿಸಿದೆ. ಮಳೆ ನೀರು ಕಾಲುವೆಗಳ ಮೇಲೆ ನಿರ್ಮಾಣಗೊಂಡ ಅನಧಿಕೃತ ನಿರ್ಮಿತಿಗಳನ್ನು ಬಿಬಿಎಂಪಿ ಕೆಡವುತ್ತಿರುವುದು ಹಣವಂತರು ಹಾಗೂ ರಾಜಕೀಯ ಪ್ರಾಬಲ್ಯವಿರುವ ಬಿಲ್ಡರ್‍ಗಳಿಗೆ ನಗರವನ್ನು “ಮಾರಾಟ’ ಮಾಡಿರುವುದಕ್ಕೆ ಸಾಕ್ಷಿ. ತಮ್ಮದಲ್ಲದ ತಪ್ಪಿಗೆ ಜನ ನರಳುತ್ತಿದ್ದರೆ, ನಗರವನ್ನು ನಿರ್ವಹಣೆ ಮಾಡಬೇಕಾದ…...

Read more

ಮನೆ ಮಾಲೀಕರಿಗೆ ಸಂಕಟ: ಅಧಿಕಾರಿಗಳು-ಬಿಲ್ಡರ್‍ಗಳಿಗೆ ಯಾವುದೇ ಶಿಕ್ಷೆಯಿಲ್ಲ

ಬಿಬಿಎಂಪಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುತ್ತಿರುವ ಹೊತ್ತಿನಲ್ಲೇ ಇನ್ನೊಂದು ಮುಖ್ಯ ಕೆಲಸವನ್ನು ಮರೆಯಿತು: ಇಂಥ ಕಟ್ಟಡಗಳು ತಲೆಯೆತ್ತಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು! ಅಕ್ರಮ ಕಟ್ಟಡಗಳನ್ನು ಗುರುತಿಸಿದ ಬಿಬಿಎಂಪಿಗೆ ಅವುಗಳ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿರಲಿಲ್ಲ. ಸರ್ಕಾರದ ಏಜೆನ್ಸಿಗಳು ಕಟ್ಟಡದ ಯೋಜನೆ ಅಂಗೀಕಾರ, ಆರಂಭದ ಪ್ರಮಾಣಪತ್ರ, ಅಂತ್ಯಗೊಂಡ ಬಳಿಕ ನೀಡುವ ಪ್ರಮಾಣಪತ್ರ ಮತ್ತು ಖಾತೆಯನ್ನು ಕಟ್ಟಡ ನಿರ್ಮಾಣದ ನಾನಾ ಹಂತದಲ್ಲಿ ನೀಡಿರುತ್ತವೆ. ಇಷ್ಟೆಲ್ಲ ಅನುಮತಿ ನೀಡಿಕೆಗಳ…...

Read more

ಪರ್ವತೋಪಾದಿಯಲ್ಲಿ ತುಂಬಿರುವ ತ್ಯಾಜ್ಯದ ನಿವಾರಣೆ ಕಷ್ಟದ ಕೆಲಸ

ನ್ಯೂಯಾರ್ಕ್ ಟೈಮ್ಸ್‍ನಲ್ಲಿ “ಇಂಡಿಯಾಸ್ ಪ್ಲೇಗ್, ತ್ರ್ಯಾಷ್, ಡ್ರೌನ್ಸ್ ಇಟ್ಸ್ ಗಾರ್ಡನ್ ಸಿಟಿ ಡ್ಯೂರಿಂಗ್ ಸ್ಟ್ರೈಕ್’ ಲೇಖನ ಪ್ರಕಟಗೊಂಡು, “ಉದ್ಯಾನಗಳ ನಗರ’ ಜಾಗತಿಕ ಮಟ್ಟದಲ್ಲಿ “ಕಸದ ನಗರ’ವಾಗಿ ಪ್ರಖ್ಯಾತಗೊಂಡು ನಾಲ್ಕು ವರ್ಷ ಕಳೆದಿದೆ. ಭಾರತದ ಸಿಲಿಕಾನ್ ಕಣಿವೆಯೆಂದು ಹೆಸರಾದ ಮತ್ತು ಜಗತ್ತಿನ ಅತ್ಯುತ್ತಮವಾಗಿ ನಿರ್ವಹಿಸಲ್ಪಡುತ್ತಿರುವ ಕಂಪನಿಗಳಿರುವ ನಗರಕ್ಕೆ ತನ್ನ ಸಾರ್ವಜನಿಕ ಆರೋಗ್ಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಾಲ್ಕು ವರ್ಷ ತಾರ್ಕಿಕವಾಗಿ ಸಾಕು. ಸರ್ಕಾರದ ಸಂಸ್ಥೆಯೊಂದು, ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ), ಕಳೆದ ಬುಧವಾಗ…...

Read more

ನಮ್ಮ ಹಕ್ಕು-ನಾಗರಿಕ ಹಕ್ಕುಗಳ ಸರಣಿ:

ನಮ್ಮ ಬೆಂಗಳೂರು ಪ್ರತಿಷ್ಠಾನವು ಸಂಸದ ಶ್ರೀ ರಾಜೀವ್ ಚಂದ್ರಶೇಖರ್ ಅವರ ಸಹಭಾಗಿತ್ವದಲ್ಲಿ ಜೂನ್ 16,2016ರಂದು ಇಂಥದ್ದೊಂದು ಮೊಟ್ಟ ಮೊದಲ ಉಪಕ್ರಮ ಎನ್ನಬಹುದಾದ ನಾಗರಿಕರ ಪರಸ್ಪರ ಸಂವಾದಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಇತ್ತೀಚೆಗೆ ಮಂಜೂರಾದ ರಿಯಲ್ ಎಸ್ಟೇಟ್ ರೆಗ್ಯುಲೇಷನ್ ಆಕ್ಟ್(ರೇರಾ) ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸು ವುದು, ಮಾಹಿತಿ ನೀಡುವುದು ಹಾಗೂ ಶಿಕ್ಷಣ ನೀಡುವುದು ಕಾರ್ಯಾಗಾರದ ಉದ್ದೇಶ. ಕಾನೂನು ಉಲ್ಲಂಘಿಸುವ/ವಂಚಕ ಬಿಲ್ಡರ್‍ಗಳ ವಿರುದ್ಧ ಗ್ರಾಹಕರಿಗೆ ಇರುವ ಹಕ್ಕುಗಳನ್ನು ಅರ್ಥ ಮಾಡಿ ಕೊಳ್ಳಲು ನೆರವಾಗುವುದು…...

Read more

ಬರದ ದ್ವಂದ್ವ:

ಬರ ಬಂದಾಗ ಪ್ರತಿ ಹನಿಯನ್ನೂ ಉಳಿಸಿ-ಪ್ರತಿ ದಿನ, ಎಲ್ಲ ರೀತಿಯಲ್ಲೂ “ಸ್ವಾಭಾವಿಕ ಅವಘಡ’ ಎಂದರೆ ಆರ್ಭಟಿಸುತ್ತಿರುವ ಭೂಕಂಪ, ಭಾರಿ ಪ್ರವಾಹ, ಸರ್ವನಾಶ ಮಾಡುವ ಚಂಡಮಾರುತ ಇತ್ಯಾದಿ ಚಿತ್ರಣಗಳು ಕಣ್ಣಿನ ಮುಂದೆ ಬರುತ್ತವೆ. ಆದರೆ, ಬರ ಕೂಡ ಸರ್ವನಾಶ ಮಾಡಬಲ್ಲ ಸ್ವಾಭಾವಿಕ ಅವಘಡ. ಬರ ಎನ್ನುವುದು ಪಾರಿಸರಿಕ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿಷಯವಾಗಿದ್ದು, ಹವಾಮಾನ ಅಸ್ಥಿರತೆ ಹಾಗೂ ಊಹಿಸಲಾಗದಿರುವಿಕೆಯಿಂದ ದೇಶದಲ್ಲಿನ ದುರ್ಬಲರು ಗಂಭೀರ ಅಪಾಯ ಎದುರಿಸುತ್ತಿದ್ದಾರೆ. ಭಾರತದ ಆರ್ಥಿಕತೆ ಹಾಗೂ ಜನರು ಮಳೆಯನ್ನೇ ಅತಿಯಾಗಿ ಆಶ್ರಯಿಸಿದ್ದಾರೆ. ಆದರೆ, ದಶಕಗಳಿಂದ ಕಾಣದ ತೀವ್ರ…...

Read more

ಅಕ್ರಮ ವಾಣಿಜ್ಯೀಕರಣ ಪ್ರಕರಣ

ಆರ್ಎಂಪಿ-2015ರಡಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಸಂಸ್ಥೆಗಳಿಗೆ ಪರವಾನಗಿ ನೀಡುವುದನ್ನು ನಿಷೇಧದ ಹೊರತಾಗಿ ಬಿಬಿಎಂಪಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಾಣಿಜ್ಯ ಕಾಳಜಿಗಳನ್ನು ಸ್ಥಾಪಿಸಲು ಅನುಮತಿ ನೀಡುವುದನ್ನು ಮುಂದುವರಿಸಿತು. ಕೋರಮಂಗಲದಲ್ಲಿರುವ ‘ಬ್ರೇಕ್‌ಫಾಸ್ಟ್ ಕ್ಲಬ್‌’ಗೆ ಅಂತಹ ಪರವಾನಗಿ ನೀಡುವ ಒಂದು ಸಂದರ್ಭ ‘ಬ್ರೇಕ್‌ಫಾಸ್ಟ್ ಕ್ಲಬ್’ ಸ್ಥಾಪನೆಗೆ ವ್ಯಾಪಾರ ಪರವಾನಗಿ ಪಡೆಯಲು ಆಗಿನ ಬಿಬಿಎಂಪಿ ಆಯುಕ್ತರಾದ ಶ್ರೀ ಲಕ್ಷ್ಮೀನಾರಾಯಣ ಅವರು ಖುದ್ದಾಗಿ ಮಧ್ಯಪ್ರವೇಶಿಸಿದ್ದಾರೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನಕ್ಕೆ ತಿಳಿದಿತ್ತು. ಈ ವ್ಯಾಪಾರ ಪರವಾನಗಿಯ ಅನುದಾನಕ್ಕೆ…...

Read more